ತ್ರಿಸ್ತರ ಪಂಚಾಯತ್ ವಾರ್ಡ್‌ಗಳ ಪುನರಚನೆ- ಅಧಿಸೂಚನೆ ಜ್ಯಾರಿ: ಜಿಲ್ಲೆಯಲ್ಲಿ 61 ಸಹಿತ ರಾಜ್ಯದಲ್ಲಿ 1577ರಷ್ಟು ವಾರ್ಡ್‌ಗಳ ಹೆಚ್ಚಳ
ಕಾಸರಗೋಡು: ಮುಂದಿನ ವರ್ಷ ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಯಲಿರುವಂತೆಯೇ ಅದಕ್ಕೆ ಪೂರ್ವಭಾವಿಯಾಗಿ ಗ್ರಾಮ ಪಂಚಾಯತ್, ಬ್ಲೋಕ್ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ಗಳ ವಾರ್ಡ್ಗಳ ವಿಭಜನೆ ರಚನೆ ಕ್ರಮಗಳನ್ನು ಪೂರ್ತೀಕರಿಸಿ ರಾಜ್ಯ ಸರಕಾರ ವಿದ್ಯುಕ್ತ ಅಧಿಸೂಚನೆ ಜ್ಯಾರಿಗೊಳಿಸಿದೆ. ಇದರಂತೆ ಕಾಸರಗೋಡು ಜಿಲ್ಲೆಯ ಗ್ರಾಮ, ಬ್ಲೋಕ್ ಮತ್ತು ಜಿಲ್ಲಾ ಪಂಚಾಯತ್ಗಳ ವಾರ್ಡ್ಗಳ ಸಂಖ್ಯೆಯಲ್ಲಿ 61 ಸೇರಿದಂತೆ ರಾಜ್ಯದಲ್ಲಿ ಒಟ್ಟಾರೆಯಾಗಿ ವಾರ್ಡ್ಗಳ ಸಂಖ್ಯೆಯಲ್ಲಿ 1577ರಷ್ಟು ಹೆಚ್ಚಳ ಉಂಟಾಗಿದೆ. ರಾಜ್ಯದಲ್ಲಿ ಒಟ್ಟು 941 ಗ್ರಾಮ ಪಂಚಾಯತ್ಗಳಿದ್ದು, ಅದರಲ್ಲಿ ಈ ತನಕ ಒಟ್ಟಾರೆಯಾಗಿರುವ 15962ರಿಂದ ಈಗ 17337ಕ್ಕೇರಿದೆ. ಅಂದರೆ ವಾರ್ಡ್ಗಳ ಸಂಖ್ಯೆಯಲ್ಲಿ 1375ರಷ್ಟು ಏರಿಕೆ ಉಂಟಾಗಿದೆ.
ಇನ್ನು ರಾಜ್ಯದಲ್ಲಿ ಒಟ್ಟು 152 ಬ್ಲೋಕ್ ಪಂಚಾಯತ್ಗಳಿದ್ದು ಅದರ ಸಂಖ್ಯೆಯಲ್ಲೂ 187ರಷ್ಟು ಹೆಚ್ಚಳ ಉಂಟಾಗಿದ್ದು, ಆ ಮೂಲಕ ಒಟ್ಟು ವಾರ್ಡ್ (ಡಿವಿಶನ್)ಗಳ ಸಂಖ್ಯೆ 2267ರಿಂದ ಈಗ 2080ಕ್ಕೇರಿದೆ.
2011ರ ಜನಗಣತಿ ಆಧಾರದಲ್ಲಿ ಜನಸಂಖ್ಯೆಯಲ್ಲಿ ಉಂಟಾದ ಏರಿಕೆಯ ಆಧಾರದಲ್ಲಿ ವಾರ್ಡ್ಗಳ ಸಂಖ್ಯೆ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ 14 ಜಿಲ್ಲಾ ಪಂಚಾಯತ್ಗಳಲ್ಲಾಗಿ ತಿರುವನಂತಪುರದಲ್ಲಿ 2 ಮತ್ತು ಇತರ ಜಿಲ್ಲೆಗಳಲ್ಲಿ ತಲಾ 1 ಸೇರಿದಂತೆ ಅವುಗಳ ಡಿವಿಶನ್ ಈಗಿನ 331ರಿಂದ 346ಕ್ಕೇರಿಸಲಾಗಿದೆ.
ಸ್ಥಳೀಯಾಡಳಿತ ಸಂಸ್ಥೆಗಳ ಒಟ್ಟು ಸ್ಥಾನಗಳಲ್ಲಿ ಶೇ. 50ರಷ್ಟನ್ನು ಮಹಿಳೆಯರಿಗಾಗಿ ಮೀಸಲಿರಿಸಲಾಗಿದೆ. ಜನಸಂಖ್ಯೆಗೆ ಹೊಂದಿಕೊAಡು ವಾರ್ಡ್ಗಳ ಸಂಖ್ಯೆ ಹೆಚ್ಚಿಸಲಾಗಿದ್ದು, ಅವುಗಳ ಗಡಿ ನಿರ್ಣಯ ಶೀಘ್ರ ನಡೆಯಲಿದೆ. ಆ ಕುರಿತಾದ ಚರ್ಚೆ ಈಗ ಆರಂಭಗೊAಡಿದೆ.