ತ್ರೀ ಸ್ಟಾರ್‌ಗಿಂತ ಮೇಲಿನ ಹೋಟೆಲ್‌ಗಳಲ್ಲಿ 1ನೇ ತಾರೀಕಿನಂದು ಮದ್ಯ ಮಾರಾಟ ಮಾಡಲು ಅನುಮತಿ

ಕಾಸರಗೋಡು: ರಾಜ್ಯದಲ್ಲಿ ಹೊಸ ಮದ್ಯನೀತಿಗೆ ಸಚಿವಸಂಪುಟ ಸಭೆ ಅಂಗೀಕಾರ ನೀಡಿದೆ. ಡ್ರೈ ಡೇ ಆಗಿ ಆಚರಿಸುತ್ತಿದ್ದ ೧ನೇ ತಾರೀಕಿನಂದು ಇನ್ನು ತ್ರೀ ಸ್ಟಾರ್‌ಗಿಂತ ಮೇಲಿನ ಹೋಟೆಲ್‌ಗಳಲ್ಲಿ ಮದ್ಯ ಮಾರಾಟ ಮಾಡಬಹುದೆಂದು ಹೊಸ ಮದ್ಯನೀತಿಗೆ ನಿನ್ನೆ ಸೇರಿದ ಸಚಿವ ಸಂಪುಟ  ಸಭೆ ಅಂಗೀಕಾರ ನೀಡಿದೆ. ಆದರೆ 1ನೇ ದಿನಾಂಕದ ಡ್ರೈ ಡೇ ಪೂರ್ಣವಾಗಿ ತೆಗೆದು ಹಾಕುವ ಬೇಡಿಕೆಯನ್ನು ಅಂಗೀಕರಿಸಲಾಗಿಲ್ಲ.

ಟೂರಿಸಂ ಕಾನ್ಫಸೆನ್ಸ್‌ಗಳು, ಇವೆಂಟ್‌ಗಳು ಬುಕ್ ಮಾಡಿದ್ದರೆ ಅಬಕಾರಿ ಕಮಿಷನರ್‌ಗೆ ಅರ್ಜಿ ನೀಡಬೇಕು. ಪ್ರತ್ಯೇಕ ಶುಲ್ಕ ವಸೂಲು ಮಾಡಿ ಹೋಟೆಲ್‌ಗಳಲ್ಲಿ ಡ್ರೈ ಡೇ ದಿನದಂದು ಮದ್ಯ ಮಾರಾಟ ಮಾಡಲು ಅನುಮತಿ ನೀಡಲಾಗುವುದು. ಇದಕ್ಕಿರುವ ಶುಲ್ಕ ೫೦,೦೦೦ ರೂ. ಆಗಿದೆ. ಬಾರ್ ಲೈಸನ್ಸ್ ಶುಲ್ಕ ಹೆಚ್ಚಿಸಲಾಗಿಲ್ಲ. ಅಲ್ಲದೆ ಬಾರ್‌ನ ಚಟುವಟಿಕಾ ಸಮಯದಲ್ಲೂ ಬದಲಾವಣೆ ಮಾಡಲಾಗಿಲ್ಲ. ಪ್ರವಾಸೋದ್ಯಮ ವಲಯದಲ್ಲಿ ಪ್ರತ್ಯೇಕ ದೋಣಿ ವಿಹಾರದಲ್ಲಿ ಮದ್ಯ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಹೌಸ್ ಬೋಟ್‌ಗಳನ್ನು ಈ ವಿಭಾಗದಲ್ಲಿ ಸೇರಿಸಲಾಗಿಲ್ಲ. ಶೇಂದಿ ಅಂಗಡಿಗಳಿಗೆ ಸಂಬಂಧಿಸಿರುವ ಉಪಹಾರ ಗೃಹಗಳಲ್ಲಿ ಶೇಂದಿ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಹೋಟೆಲ್‌ಗಳು ಒಳಗೊಂಡ ರೇಂಜ್‌ನ ಶೇಂದಿ ಅಂಗಡಿಯಿಂದ ಮಾತ್ರವೇ ಶೇಂದಿ ಖರೀದಿಸಿ ಇಲ್ಲಿ ವಿತರಿಸಬಹುದಾಗಿದೆ. ಡ್ರೈ ಡೇ ಸಹಿತದ ಅಂತಿಮ ತೀರ್ಮಾನ ಕೈಗೊಳ್ಳಲು ಹಲವು ಬಾರಿ ರಾಜ್ಯ ಸರಕಾರ ಸಭೆಯನ್ನು ಮುಂದೂಡಿತ್ತು.

You cannot copy contents of this page