ದರ್ಶನ್‌ಗೆ ಬಳ್ಳಾರಿ ಜೈಲಿನಲ್ಲಿ ರೇಣುಕಾಸ್ವಾಮಿಯ ಪ್ರೇತಬಾಧೆ: ಜೈಲು ಬದಲಿಸಬೇಕೆಂಬ ಬೇಡಿಕೆ

ಬೆಂಗಳೂರು:  ಚಿತ್ರದುರ್ಗ ನಿವಾಸಿಯಾದ ರೇಣುಕಾ ಸ್ವಾಮಿ ಎಂಬವರನ್ನು ಕೊಲೆಗೈದ ಪ್ರಕರಣದಲ್ಲಿ   ಬಳ್ಳಾರಿ ಜೈಲಿನಲ್ಲಿ ರಿಮಾಂಡ್ ನಲ್ಲಿರುವ ಕನ್ನಡ ಸಿನಿಮಾ ನಟ ದರ್ಶನ್‌ಗೆ ರೇಣುಕಾಸ್ವಾಮಿಯ ಪ್ರೇತ ಬಾಧಿಸುತ್ತಿರುವುದಾಗಿ ದೂರಲಾಗಿದೆ.   ಜೈಲಿನ ಸೆಲ್‌ನಲ್ಲಿ ದರ್ಶನ್ ಏಕಾಂಗಿಯಾ ಗಿದ್ದಾನೆನ್ನಲಾಗಿದೆ.  ರಾತ್ರಿ ಹೊತ್ತು  ರೇಣುಕಾಸ್ವಾಮಿಯ ಪ್ರೇತ ಬಂದು ಬಾಧಿಸುತ್ತಿರುವುದರಿಂದ  ನಿದ್ದೆ ಮಾಡಲು  ಸಾಧ್ಯವಾಗದ ಸ್ಥಿತಿ ಉಂಟಾಗಿದೆಯೆಂದು ದರ್ಶನ್ ತಿಳಿಸುತ್ತಿರುವುದಾಗಿ ಹೇಳಲಾಗಿದೆ.  ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ತನ್ನನ್ನು ಬದಲಿಸಬೇಕೆಂಬ ಬೇಡಿಕೆಯನ್ನು ಮುಂದಿರಿಸಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ವಿಚಾರಣಾ ನ್ಯಾಯಾಲ ಯದ ಮುಂದೆ ಈ ಬಗ್ಗೆ ದರ್ಶನ್ ತಿಳಿಸಿದ್ದಾನ್ನೆನ್ನಲಾಗಿದೆ. ಈ ಹಿಂದೆ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿದ್ದ ವೇಳೆ ದರ್ಶನ್‌ಗೆ ವಿಐಪಿ ಪರಿಗಣನೆ ಲಭಿಸಿತ್ತು ಎಂಬುದು ವಿವಾz ಕ್ಕೆಡೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಅಗೋಸ್ತ್ 29ರಂದು ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು.  ದರ್ಶನ್ ಹಾಗೂ ಇತರ ಮೂವರು ಗೂಂಡಾ ನೇತಾರರು ಜೈಲು ಹಿತ್ತಿಲಿನಲ್ಲಿ ಕುರ್ಚಿ ಮೇಲೆ ಕುಳಿತು ಸಿಗರೇಟ್ ಸೇದುತ್ತಿರುವ ವೀಡಿಯೋ ಬಹಿರಂಗಗೊಂಡ ಬೆನ್ನಲ್ಲೇ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಜೂನ್ ೮ರಂದು ಚಿತ್ರದುರ್ಗ ನಿವಾಸಿಯೂ, ದರ್ಶನ್‌ನ ಅಭಿಮಾನಿಯೂ ಆಗಿರುವ ಫಾರ್ಮಸಿ ನೌಕರನಾದ ರೇಣುಕಾಸ್ವಾಮಿಯನ್ನು ಹಲ್ಲೆಗೈದು ಕೊಲೆಗೈದ ಬಳಿಕ ಮೃತದೇಹವನ್ನು ಚರಂಡಿಯಲ್ಲಿ ಉಪೇಕ್ಷಿಸಲಾಯಿ ತೆಂಬ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ಸಹಿತ ಕೆಲವು ಆರೋಪಿಗ ಳನ್ನು ಸೆರೆಹಿಡಿಯಲಾಗಿತ್ತು. 

ಈ ಪ್ರಕರಣದಲ್ಲಿ ದರ್ಶನ್ ನೇರವಾಗಿ ಭಾಗಿಯಾಗಿರುವುದಾಗಿ  ತನಿಖೆಯಲ್ಲಿ ತಿಳಿದುಬಂದಿತ್ತು. ರೇಣುಕಾಸ್ವಾಮಿ ಯನ್ನು ಕೊಲೆಗೈಯ್ಯಲು ನಡೆಸಿದ ಗೂಢಾಲೋಚನೆಯಲ್ಲಿ ದಶನ್ ಹಾಗೂ ನಟಿ ಪವಿತ್ರಾಗೌಡ ಸಹಿತ ೧೭ ಮಂದಿ ಶಾಮೀಲಾಗಿದ್ದಾರೆಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. ಪವಿತ್ರಾ ಗೌಡ ಪ್ರಕರಣದ ಮುಖ್ಯ ಆರೋಪಿಯಾಗಿದ್ದು, ದರ್ಶನ್ ಎರಡನೇ ಆರೋಪಿಯಾಗಿದ್ದಾನೆ.

You cannot copy contents of this page