ದರ್ಸ್ ವಿದ್ಯಾರ್ಥಿ ಹೊಳೆಯಲ್ಲಿ ಮುಳುಗಿ ಸಾವು
ಕಾಸರಗೋಡು: ಚಟ್ಟಂಚಾಲ್ ನಿವಾಸಿ ಯುವಕ ಕಣ್ಣೂರು ಬಳಿ ಮಾತಮಂಗಲ ಪೆರುವಾಂಬ ಎಂಬಲ್ಲಿನ ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಚಟ್ಟಂಚಾಲ್ ಬಳಿಯ ಕೋಳಿಯಡ್ಕ ನಿವಾಸಿ ರಮೀಸ್ (18) ಮೃತಪಟ್ಟ ದುರ್ದೈವಿ ಪೆರುವಾಂಬದಲ್ಲಿ ದರ್ಸ್ ವಿದ್ಯಾರ್ಥಿಯಾದ ರಮೀಸ್ ನಿನ್ನೆ ಮಧ್ಯಾಹ್ನ ಸಹಪಾಠಿಗಳೊಂದಿಗೆ ಹೊಳೆಯಲ್ಲಿ ಸ್ನಾನ ಮಾಡಲೆಂದು ತೆರಳಿದ್ದರೆನ್ನಲಾಗಿದೆ. ಸ್ನಾನ ಮಾಡುತ್ತಿದ್ದಾಗ ಆಯ ತಪ್ಪಿ ನೀರಿನಲ್ಲಿ ಮುಳುಗಿ ಸಾವು ಸಂಭವಿಸಿದೆ. ಕೋಳಿಯಡ್ಕ ನಿವಾಸಿ ಅಬೂಬಕರ್- ರಾಬಿಯ ದಂಪತಿ ಪುತ್ರನಾದ ಮೃತರು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.