ದಾಖಲುಪತ್ರಗಳಿಲ್ಲದೆ ಸಾಗಿಸುತ್ತಿದ್ದ 20.8 ಲಕ್ಷ ರೂ. ಪತ್ತೆ: ಕರ್ನಾಟಕ ನಿವಾಸಿ ವಶ

ಮಂಜೇಶ್ವರ: ಸರಿಯಾದ ದಾಖಲುಪತ್ರಗಳಿಲ್ಲದೆ ಬಸ್ಸಿನಲ್ಲಿ ಕಾಸರ ಗೋಡಿನತ್ತ ಸಾಗಿಸುತ್ತಿದ್ದ 20,80,000 ರೂ. ನಗದನ್ನು ಮಂಜೇಶ್ವರ ಅಬಕಾರಿ ತಪಾಸಣಾ ಕೇಂದ್ರದಿಂದ ಎಕ್ಸೈಸ್ ಸರ್ಕಲ್ ಇನ್‌ಸ್ಪೆಕ್ಟರ್ ಶಿಜಿಲ್ ಕುಮಾರ್ ನೇತೃತ್ವದ ಅಬಕಾರಿ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

ಇದಕ್ಕೆ ಸಂಬಂಧಿಸಿ ದಕ್ಷಿಣಕನ್ನಡ ಜಿಲ್ಲೆಯ ಜಯಶೀಲ ಪುಟ್ಟಣ್ಣ ಶೆಟ್ಟಿ (52) ಎಂಬಾತನನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡು ನಂತರ ವಶಪಡಿಸಲಾದ ನಗದು ಸಹಿತ ಆತನನ್ನು ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಮಂಗಳೂರಿನಿಂದ ಕಾಸರಗೋ ಡಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಿಂದ ನಗದು ವಶಪಡಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಎಕ್ಸೈಸ್ ಇನ್‌ಸ್ಪೆಕ್ಟರ್ ಜಿನು ಜೇಮ್ಸ್, ಪ್ರಿವೆಂಟೀವ್ ಆಫೀಸರ್ (ಗ್ರೇಡ್) ಬಾಬು ರಾಜನ್ ಪಿ.ಕೆ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಸಜಿತ್ ಟಿ.ವಿ, ಸುನಿಲ್ ಕುಮಾರ್ ಪಿ.ಕೆ ಎಂಬಿವರು ಒಳಗೊಂಡಿದ್ದರು. ಪ್ರಿವೆಂಟೀವ್ ಆಫೀಸರ್ ಸತೀಶನ್  ನಾಲುಪುರೈಕಲ್ ಮತ್ತು ಕೆಮು ತಂಡದ ಸಹಾಯವೂ ಇದಕ್ಕೆ ಲಭಿಸಿದೆ.

RELATED NEWS

You cannot copy contents of this page