ದಾಖಲು ಪತ್ರಗಳಿಲ್ಲದೆ ಮನೆಯಲ್ಲಿ ಬಚ್ಚಿಟ್ಟಿದ್ದ 6.35 ಲಕ್ಷ ರೂ., ಎಣಿಕೆ ಯಂತ್ರ ವಶ

ಕಾಸರಗೋಡು: ಸರಿಯಾದ ದಾಖಲುಪತ್ರಗಳಿಲ್ಲದೆ ಮನೆಯಲ್ಲಿ ಬಚ್ಚಿಟ್ಟಿದ್ದ 6,35,000 ರೂ. ಹಾಗೂ ನೋಟು ಎಣಿಸುವ ಯಂತ್ರವನ್ನು ಕಾಸರಗೋಡು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ತಳಂಗರೆ ನುಸ್ರತ್ ನಗರದ ಮನೆಯೊಂದರಲ್ಲಿ ಪೊಲೀಸರು ಹಣ ವಶಪಡಿಸಿಕೊಂಡಿದ್ದಾರೆ.  ಆ ಮನೆಯಲ್ಲಿ ಅಕ್ರಮವಾಗಿ ಹಣ ಬಚ್ಚಿಡಲಾಗಿದೆ ಎಂಬ ಗುಪ್ತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಅದರ  ಜಾಡು ಹಿಡಿದು ನಿನ್ನೆ ಪೊಲೀಸರು ಆ ಮನೆಗೆ ದಾಳಿ ನಡೆಸಿ ಅಲ್ಲಿಂದ ಹಣ ಪತ್ತೆಹಚ್ಚಿ ಠಾಣೆಗೊಯ್ದಿದ್ದಾರೆ. ಈ ಹಣವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page