ದಿನೇ ದಿನೇ ಏರುತ್ತಿರುವ ತಾಪಮಾನ: ಬೆಂದು ಬೇಯತೊಡಗಿರುವ ಕೇರಳ
ಕಾಸರಗೋಡು: ಬೇಸಿಗೆ ತಾಪಮಾನ ದಿನೇ ದಿನೇ ಏರುತ್ತಾ ಸಾಗುತ್ತಿದ್ದು, ಅದು ಕೇರಳವನ್ನು ಬೆಂದು ಬೇಯುವಂತೆ ಮಾಡತೊಡಗಿದೆ. ಎಪ್ರಿಲ್11ರ ತನಕ ಸಾಧಾರಣ ತಾಪಮಾನ ಮಟ್ಟ ಸಾಧಾರಣ ಮಟ್ಟಕ್ಕಿಂತ ಎರಡು ಡಿಗ್ರಿಯಷ್ಟು ಏರಲಿದೆ. ರಾಜ್ಯದಲ್ಲಿ ಪಾಲ್ಘಾಟ್ ಜಿಲ್ಲೆಯಲ್ಲಿ ತಾಪಮಾನ ಮಟ್ಟ ಈಗ 41.5 ಡಿಗ್ರಿಗೇರಿದೆ. ಕಾಸರಗೋಡು ಜಿಲ್ಲೆಯಲ್ಲಿ ಮಟ್ಟ ೩೬ ಡಿಗ್ರಿಗೇರಿದೆ. ಉಳಿದ ಜಿಲ್ಲೆಗಳಲ್ಲಿ ೩೭ರಿಂದ ೩೮ ಡಿಗ್ರಿಯಲ್ಲಿದೆ. ಇದೇ ಸಂದರ್ಭದಲ್ಲಿ ಕಾಸರಗೋಡು, ಪಾಲ್ಘಾಟ್, ಮಲಪ್ಪುರಂ ಮತ್ತು ಕಣ್ಣೂರು ಜಿಲ್ಲೆಯಲ್ಲಿ ಇಂದು ಬೇಸಿಗೆ ಮಳೆ ಸುರಿಯುವ ಸಾಧ್ಯತೆ ಇದೆ. ನಾಳೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮಳೆ ಸುರಿಯುವ ಸಾಧ್ಯತೆಯೂ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.