ದಿಲ್ಲಿಯ ಏಳು ಆಸ್ಪತ್ರೆಗಳು, ತಿಹಾರ್ ಜೈಲಿಗೆ ಮತ್ತೆ ಬಾಂಬ್ ಬೆದರಿಕೆ
ನವದೆಹಲಿ: ಕಳೆದ ಕೆಲವು ದಿನಗಳಿಂದ ದೆಹಲಿ ಮತ್ತು ದೇಶಾದ್ಯಂತ ಇತರ ಹಲವೆಡೆಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದು ಅದು ಆತಂಕ ಸೃಷ್ಟಿಸಿರುವ ವೇಳೆಯಲ್ಲೇ ದಿಲ್ಲಿಯ ಏಳು ಆಸ್ಪತ್ರೆಗಳು ಮತ್ತು ತಿಹಾರ್ ಜೈಲಿಗೆ ಇ-ಮೇಲ್ ಮೂಲಕ ಮತ್ತೆ ಬಾಂಬ್ ಬೆದರಿಕೆ ಬಂದಿದೆ.
ಆ ಮೂಲಕ ಭಯದ ವಾತಾವರಣ ಸೃಷ್ಟಿಸುವ ದುಷ್ಕರ್ಮಿಗಳ ಅಟ್ಟಹಾಸ ಇನ್ನೂ ಮುಂದುವರಿದಿದೆ. ದೇಶಾದ್ಯಂತ ಶಾಲೆಗಳು, ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣಗಳು ಹೀಗೆ ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ಇಂತಹ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶಗಳು ಇತ್ತೀಚೆಗಿನಿಂದ ವ್ಯಾಪಕವಾಗಿ ಬರತೊಡಗಿದೆ. ವಿದೇಶಗಳನ್ನೇ ಕೇಂದ್ರೀಕರಿಸಿ ಇಂತಹ ಇ-ಮೇಲ್ ಬೆದರಿಕೆ ಸಂದೇಶಗಳು ಲಭಿಸುತ್ತಿದೆ. ಅದೇ ರೀತಿ ಇಂದು ಬಂದ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸರು, ಬಾಂಬ್ ನಿಷ್ಕ್ರಿಯದಳ, ಅಗ್ನಿಶಾಮಕದಳ ಮತ್ತು ಬಾಂಬ್ ಪತ್ತೆದಳ ದಾವಿಸಿ ಬಂದು ಎಲ್ಲಾ ಆಸ್ಪತ್ರೆಗಳು ಮತ್ತು ಜೈಲಿನಲ್ಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು.