‘ದಿ ಕೇರಳ ಸ್ಟೋರಿ’ ನಿರ್ದೇಶಕರಿಗೆ ರಾಷ್ಟ್ರೀಯ ಪುರಸ್ಕಾರ: ಮುಖ್ಯಮಂತ್ರಿ ಆಕ್ರೋಶ

ತಿರುವನಂತಪುರ: ನಿನ್ನೆ ಪ್ರಕಟಿಸಲಾದ 2023ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ‘ದಿ ಕೇರಳಸ್ಟೋರಿ’ ಎಂಬ ಸಿನಿಮಾ ನಿರ್ದೇಶಿಸಿದ  ಸುದೀಪ್ರೋ ಸೇನ್‌ರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ನೀಡಿದುದಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೀರ್ಪುಗಾರರು ಭಾರತೀಯ ಚಿತ್ರರಂಗದ  ಹೆಮ್ಮೆಯ ಸಂಪ್ರದಾಯಕ್ಕೆ ದ್ರೋಹ ಬಗೆದಿದ್ದಾರೆ. ಕೇರಳವನ್ನು ಕೆಣಕುವ ಮತ್ತು ಕೋಮುವಾದವನ್ನು ಹರಡುವ ಉದ್ದೇಶದಿಂದ ಸುಳ್ಳುಗಳ ಮೇಲೆ ನಿರ್ಮಿಸಲಾದ ದಿ ಕೇರಳ ಸ್ಟೋರಿ ಚಿತ್ರಕ್ಕೆ ಪ್ರಶಸ್ತಿ ನೀಡುವ ಮೂಲಕ ತೀರ್ಪುಗಾರರು ದೀರ್ಘ ಕಾಲದಿಂದ ಕೋಮು ಸಾಮರಸ್ಯ ಮತ್ತು ರಾಷ್ಟ್ರೀಯ  ಉನ್ನತಿಗಾಗಿ  ನಿಂತಿ ರುವ ಭಾರತೀಯ ಚಿತ್ರರಂಗದ ಹೆಮ್ಮೆಯ ಸಂಪ್ರದಾಯವನ್ನು ಅವಮಾನಿಸಿದ್ದಾರೆ.  ಇದರ ವಿರುದ್ಧ ಎಲ್ಲಾ ಕೇರಳೀಯರು ಮತ್ತು ಪ್ರಜಾಪ್ರಭುತ್ವದಲ್ಲಿ ನಂಬಿಕೆಯುಳ್ಳ ಎಲ್ಲರೂ ಧ್ವನಿಯೆತ್ತಬೇಕು. ಕಲೆಯನ್ನು ಕೋಮು ವಾದವನ್ನಾಗಿ ಬೆಳೆಸುವ ಅಸ್ತ್ರವನ್ನಾಗಿ ಬಳಸುವ ಹಾಗೂ ಪರಿವರ್ತಿಸುವ ಕೋಮುವಾದಿ ರಾಜಕೀಯದ ವಿರುದ್ಧ ಎಲ್ಲರೂ ಒಂದಾಗಬೇಕೆಂದೂ ಮುಖ್ಯಮಂತ್ರಿ ಹೇಳಿದ್ದಾರೆ.

ಇನ್ನೊಂದೆಡೆ ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್ ಕೂಡ ಈ ಪ್ರಶಸ್ತಿಯ ವಿರುದ್ಧ ರಂಗಕ್ಕಿಳಿದಿದ್ದಾರೆ. ದಿ ಕೇರಳ ಸ್ಟೋರಿಗೆ ಧಾರ್ಮಿಕ ದ್ವೇಷವನ್ನು ಉತ್ತೇಜಿಸುವ ಉದ್ದೇಶದಿಂದ ಮಾತ್ರ ಪ್ರಶಸ್ತಿ ನೀಡಲಾಗಿದೆ. ಇದು ಪ್ರತಿಭಟನಾರ್ಹ. ಬಿಜೆಪಿ ಸರಕಾರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ರಾಜಕೀಯಗೊಳಿಸ ತೊಡಗಿದೆ. ಕೇರಳದ ಬಗ್ಗೆ ಸುಳ್ಳುಗಳನ್ನು ಹರಡುವ ಮೂಲಕ ಬಿಜೆಪಿ ಮತ್ತು ವಿಭಾಜಕ ರಾಜಕೀಯವನ್ನು ಅನುಸರಿಸುತ್ತ್ತಿ ರುವ ಸಂಘ ಪರಿವಾರವು ರಾಜಕೀಯ ಲಾಭ ಪಡೆಯಲೆತ್ನಿಸುತ್ತಿದೆಯೆಂದು ಅವರು ಹೇಳಿದ್ದಾರೆ.

ಇದಾಗ್ಯೂ, ಅಸಾಧಾರಣ ಪ್ರತಿಭೆಯಿಂದ ಮಲಯಾಳಂ ಚಿತ್ರರಂಗವನ್ನು ಶ್ರೀಮಂತಗೊಳಿಸಿದ  ನಟಿ ಊರ್ವಶಿ ಮತ್ತು ನಟ ವಿಜಯ್ ರಾಘವನ್‌ರಿಗೆ ಕ್ರಮವಾಗಿ ಅತ್ಯುತ್ತಮ ಪೋಷಕ ನಟಿ ಮತ್ತು ನಟ ಪ್ರಶಸ್ತಿಗೆ ಆಯ್ಕೆಗೊಂಡಿರುವುದಕ್ಕೆ ಮುಖ್ಯಮಂತ್ರಿ ಸಂತಸ ವ್ಯಕ್ತಪಡಿಸಿದ್ದಾರೆ.  ಈ ಗೌರವಗಳು ಮಲಯಾಳಂ ಸಿನಿಮಾ ರಂಗವನ್ನು ಇನ್ನಷ್ಟು ಅತ್ಯುತ್ತಮ ಚಲನಚಿತ್ರಗ ಳೊಂದಿಗೆ ಎತ್ತರಕ್ಕೇರಿಸಲು ಪ್ರೇರೇಪಿಸಲಿದೆಯೆಂದು ಅವರು ಹೇಳಿದರು.

ದಿ ಕೇರಳ ಸ್ಟೋರಿ ಸಿನಿಮಾ ಕೇರಳದಲ್ಲಿ ಯುವತಿಯರನ್ನು ಭಯೋತ್ಪಾದಕ ಗುಂಪು ಇಸ್ಲಾಮಿಕ್ ಸ್ಟೇಟ್ ಬಲವಂತವಾಗಿ ಮತಾಂತರಿಸಿ ಅವರನ್ನು ಉಗ್ರಗಾಮಿ ಗುಂಪುಗಳಿಗೆ ನೇಮಿಸುತ್ತಿದೆಯೆಂಬ ರೀತಿಯಲ್ಲಿ  ಚಿತ್ರೀಕರಿಸಲಾಗಿತ್ತು.

Leave a Reply

Your email address will not be published. Required fields are marked *

You cannot copy content of this page