ದೀಪಾವಳಿಯ ಹೊಂಬೆಳಕಿನಲ್ಲಿ ಕಾಸರಗೋಡು ಕನ್ನಡ ರಾಜ್ಯೋತ್ಸವ: ಮಹಾಲಿಂಗೇಶ್ವರ ಭಟ್‌ರಿಗೆ ಪ್ರಶಸ್ತಿ ಪ್ರದಾನ

ಕಾಸರಗೋಡು:  ಕನ್ನಡ ನಮ್ಮ ಮಾತೃಭಾಷೆ. ನಮ್ಮ ಬದುಕು ಮತ್ತು ಸಂಸ್ಕೃತಿ. ಕನ್ನಡಕ್ಕೆ ಅವಮಾನವಾದಾಗ ರಾಜಕೀಯ ಪಕ್ಷಭೇದ ಮರೆತು ಎಲ್ಲರೂ ಒಂದಾಗಬೇಕು. ಕನ್ನಡವನ್ನು ಉಳಿಸಬೇಕೆಂಬ ಚಿಂತನೆ ಜಾಗೃತವಾ ಗಬೇಕು ಎಂಬುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಹೇಳಿದರು. ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಆಶ್ರಯದಲ್ಲಿ ನಡೆದ ಕಾಸ ರಗೋಡು ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರದ ಅಭಿವೃದ್ಧಿಗೆ ಧರ್ಮ ಮತ್ತು ರಾಜಕೀಯ ಎರಡೂ ಬೇಕು. ಆದರೆ ಧರ್ಮ ಎಂಬ ಚಕ್ರದೊಳಗೆ ರಾಜ ಕೀಯ ಪ್ರವೇಶಿಸ ಬಾರದು. ಸಂಸ್ಕೃತಿ ಉಳಿಯಲು ಧರ್ಮ ಜೀವಂತವಾಗಿರಬೇಕು ಎಂದು ರವೀಶ ತಂತ್ರಿ ಹೇಳಿದರು. ದೀಪಾವಳಿಯ ಹೊಂಬೆಳಕಿನಲ್ಲಿ ತಮಟೆ ಬಾರಿಸಿ ಕನ್ನಡ ಧ್ವಜವನ್ನು ಹಾರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಕನ್ನಡ ಹೋರಾಟಗಾರ ಮಹಾಲಿಂ ಗೇಶ್ವರ ಭಟ್ ಎಂ.ವಿ. ಅವರಿಗೆ ಕಾಸರ ಗೋಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕನ್ನಡ ಹೋ ರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಭಾಸ್ಕರ ಅಭಿನಂದನಾ ಭಾಷಣ ಮಾಡಿ ದರು. ಕನ್ನಡ ನಾಡಗೀತೆ ಸಮೂಹಗಾಯ ನದೊಂದಿಗೆ ಕಾರ್ಯಕ್ರಮ ಆರಂಭವಾ ಯಿತು. ಕರ್ನಾಟಕ ಜಾನಪದ ಕಲಾ ಒಕ್ಕೂಟದ ರಾಜ್ಯಾಧ್ಯಕ್ಷ ಕೆ. ನಾಗರಾಜ್, ಅಂತಾರಾಷ್ಟ್ರೀಯ ತಮಟೆ ಕಲಾವಿದ ಕುಂತೂರು ಕುಮಾರ್, ಧಾರ್ಮಿಕ ಮುಖಂಡ ಕೆ.ಎನ್. ವೆಂಕಟ್ರಮಣ ಹೊಳ್ಳ ಅತಿಥಿಯಾಗಿ ಭಾಗವಹಿಸಿದ್ದರು.

ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿ ದರು. ಸಮಿತಿ ನಿರ್ದೇಶಕ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಸಾಂಸ್ಕೃತಿಕ ಕಾರ್ಯ ಕ್ರಮದಂಗವಾಗಿ ಕನ್ನಡ ಕಲಾ ವೈಭವ ಬೆಂಗಳೂರು ಇವ ರಿಂದ  ತಮಟೆವಾಗನ, ವೀರಗಾತೆ, ಸಮೂ ಹ ಶಾಸ್ತ್ರೀಯ ನೃತ್ಯ ಜರಗಿತು. ದಿವಾಕರ ಪಿ. ಅಶೋಕನಗರ, ಕಾವ್ಯಾ ದೀಪ್ತಿ, ಕುಶಲ, ಅಶ್ವಿನಿ ಗುರುಪ್ರಸಾದ್, ತ್ರಿಶಾ ಜಿ.ಕೆ, ಬಬಿತಾ, ದೀಪ್ತಿ ಮೇಘರಾಜ್, ಕೃಪಾನಿಧಿ ಸಮೂಹಗೀತೆ ಹಾಡಿದರು. ಜಗದೀಶ ಕೂಡ್ಲು ನಿರೂಪಿಸಿದರು. ಕಾವ್ಯಾಕುಶಲ ವಂದಿಸಿದರು.

You cannot copy contents of this page