ದೆಹಲಿಯಲ್ಲಿ ಸಂಸದೆಯ ಮಾಲೆ ಅಪಹರಿಸಿದ ಆರೋಪಿ ಸೆರೆ
ದೆಹಲಿ: ಅತ್ಯಂತ ಭದ್ರತೆ ಇರುವ ಸ್ಥಳದಲ್ಲಿ ಕಾಂಗ್ರೆಸ್ ಸಂಸದೆ ಆರ್. ಸುಧಾರ ಕುತ್ತಿಗೆಯಿಂದ ಮಾಲೆ ಅಪಹರಿಸಿದ ಘಟನೆಯಲ್ಲಿ ಆರೋಪಿ ಸೆರೆಯಾಗಿದ್ದಾನೆ. ಆರೋಪಿಯಿಂದ ಪೊಲೀಸರು ಮಾಲೆ ಯನ್ನು ಪತ್ತೆಹಚ್ಚಿದ್ದಾರೆ. ಸೋಮವಾರ ಮುಂಜಾನೆ ನಡೆಯಲೆಂದು ತೆರಳುತ್ತಿದ್ದ ಸಂಸದೆಯ ಕುತ್ತಿಗೆಯಲ್ಲಿದ್ದ ೪ ಪವನ್‌ನ ಚಿನ್ನದ ಮಾಲೆಯನ್ನು ಅಪಹರಿಸಲಾಗಿದೆ. ಸ್ಕೂಟರ್‌ನಲ್ಲಿ ತಲುಪಿದ ತಂಡ ಮಾಲೆ ಅಪಹರಿಸಿ ಪರಾರಿಯಾಗಿದೆ. ತಮಿಳು ನಾಡಿನ ಮೈಲಾಡುತುರೈಯಿಂ ದಿರುವ ಸಂಸದೆಯಾಗಿದ್ದಾರೆ ಸುಧಾ ರಾಮಕೃಷ್ಣನ್. ಇವರು ದೆಹಲಿ ಪೊಲೀಸರಿಗೆ ಹಾಗೂ ಅಮಿತ್ ಷಾರಿಗೆ ದೂರು ನೀಡಿದ್ದರು. ಅಲ್ಲದೆ ಆ ದಾರಿಯಲ್ಲಿ ಬರುತ್ತಿದ್ದ ಪೊಲೀಸರಿಗೂ ಮಾಹಿತಿ ನೀಡಿದ್ದರು. ಸ್ಥಳೀಯ ಸಿಸಿ ಟಿವಿ ದೃಶಗಳನ್ನು ಪರಿಶೀಲಿಸಿ ಆರೋಪಿಯ ಗುರುತು ಪತ್ತೆಹಚ್ಚಲಾಗಿತ್ತು. ಸ್ಕೂಟರನ್ನು ಕಸ್ಟಡಿಗೆ ತೆಗೆಯಲಾಗಿದೆ.