ದೇವಸ್ಥಾನದಿಂದ 20 ಪವನ್‌ನ ಚಿನ್ನದೊಡವೆ ಕಳವು: ಮುಖ್ಯ ಅರ್ಚಕ ಸೆರೆ
ಪರವೂರು: ದೇವಸ್ಥಾನದಿಂದ 20 ಪವನ್‌ನ ಚಿನ್ನದ ಒಡವೆ ಕಳವುಗೈದ ಮುಖ್ಯ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲ್ಲಂ ಪರವೂರು ಚೆರುಂಬಳ ಯಕ್ಷಿಕಾಮ ದೇವಿ ಕ್ಷೇತ್ರದ ಮುಖ್ಯ ಅರ್ಚಕ ತಳಿಪರಂಬ ನಿವಾಸಿ ಹಾಗೂ ಮೂಲತಃ ಪಾರಿಪಳ್ಳಿ ಕಿಳಕ್ಕೇನೆಲ ಪುದಿಯಡತ್ ಇಲ್ಲತ್ತ್‌ನಲ್ಲಿ ವಾಸಿಸುತ್ತಿರುವ ಈಶ್ವರನ್ ನಂಬೂದಿರಿ (42) ಬಂಧಿತ ಆರೋಪಿ. ಈತ 11ತಿಂಗಳ ಹಿಂದೆಯಷ್ಟೇ ಶ್ರೀ ಕ್ಷೇತ್ರದ ಮುಖ್ಯ ಅರ್ಚಕನಾಗಿ ಸೇರ್ಪಡೆಗೊಂ ಡಿದ್ದನು. ದೇವರ ವಿಗ್ರಹದ ಚಿನ್ನದ ಒಡವೆಗಳನ್ನು ಕದ್ದು ಅದರ ಬದಲು ನಕಲಿ ಚಿನ್ನದ ಒಡವೆಗಳನ್ನು ವಿಗ್ರಹಕ್ಕೆ ತೊಡಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಕದ್ದ ಚಿನ್ನವನ್ನು ಆರೋಪಿ ವಿವಿಧ ಚಿನ್ನದಂಗಡಿಗಳಲ್ಲಿ ಮಾರಾಟ ಮಾಡಿರುವುದನ್ನು ಪೊಲೀಸರು ತನಿಖೆಯಲ್ಲಿ ಪತ್ತೆಹಚ್ಚಿದ್ದಾರೆ. ಕ್ಷೇತ್ರದ ಹೊಸ ಆಡಳಿತ ಸಮಿತಿ ಒಂದು ವಾರದ ಹಿಂದೆಯಷ್ಟೇ ಅಧಿಕಾರ ವಹಿಸಿಕೊಂಡಿತ್ತು. ಆ ಸಮಿತಿ ದೇವ ಸ್ಥಾನದ ಚಿನ್ನದ ಒಡವೆಗಳನ್ನು ಪರಿ ಶೀಲಿಸಿದಾಗ ಅದು ನಕಲಿ ಚಿನ್ನವಾ ಗಿತ್ತೆಂದು ಸ್ಪಷ್ಟಗೊಂಡಿತ್ತು. ಅದಕ್ಕೆ ಸಂಬಂಧಿಸಿ ಆಡಳಿತ ಸಮಿತಿ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ನಂತರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.