ದೇಶದಲ್ಲೇ ಅತೀ ಹೆಚ್ಚು ಪ್ರಾಯದ ಸಾಕ್ಷರತಾ ಪರೀಕ್ಷೆ ಬರೆದ ಕಾರ್ತ್ಯಾಯಿನಿ ಅಮ್ಮ ನಿಧನ
ಆಲಪ್ಪುಳ: ಅಕ್ಷರ ಲಕ್ಷಂ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ನೊಂದಿಗೆ ಉತ್ತೀರ್ಣರಾದ ಮುಟ್ಟಂ ಚಿಟ್ಟೂರು ಪಡೀಟದ ಕಾರ್ತ್ಯಾ ಯಿನಿ ಅಮ್ಮ (೧೦೧) ನಿಧನ ಹೊಂದಿದರು. ಇವರು ದೇಶದಲ್ಲೇ ಅತೀ ಹೆಚ್ಚು ಪ್ರಾಯದ ಸಾಕ್ಷರತಾ ಪರೀಕ್ಷೆ ಉತ್ತೀರ್ಣರಾದವರಾ ಗಿದ್ದಾರೆ. ೪೦ ಸಾವಿರ ಮಂದಿ ಬರೆದ ಅಕ್ಷರಲಕ್ಷಂ ಪರೀಕ್ಷೆಯಲ್ಲಿ ೯೮ ಶೇ. ಅಂಕಗಳೊಂದಿಗೆ ಇವರು ಪ್ರಥಮ ರ‍್ಯಾಂಕ್ ಗಳಿಸಿದ್ದರು. ಮನೆ ಬಳಿಯ ಕಣಿಚ್ಚನೆಲ್ಲೂರು ಎಲ್‌ಪಿ ಶಾಲೆಯಲ್ಲಿ ೨೦೧೭ರಲ್ಲಿ ಇವರು ಅಕ್ಷರಲಕ್ಷಂ ಪರೀಕ್ಷೆ ಬರೆದಿದ್ದಾರೆ. ೨೦೧೮ರಲ್ಲಿ ಇವರಿಗೆ ನಾರಿಶಕ್ತಿ ಪುರಸ್ಕಾರ ಲಭಿಸಿತ್ತು. ಸಾಕ್ಷರತಾ ಪ್ರೇರಕ್ ಸತಿ ಎಂಬವರೊಂದಿಗೆ ದೆಹಲಿಗೆ ತೆರಳಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್‌ರಿಂದ ಕಾರ್ತ್ಯಾಯಿನಿ ಅಮ್ಮ ನಾರಿಶಕ್ತಿ ಪುರಸ್ಕಾರ ಪಡೆದಿದ್ದರು.