ದೈಗೋಳಿಯಲ್ಲಿ ಸೆರೆಗೀಡಾದುದು ಅಡ್ಯನಡ್ಕ ಬ್ಯಾಂಕ್ ಕಳವುಗೈದ ತಂಡ; ಪರಾರಿಯಾದವರಲ್ಲಿ ಓರ್ವ ಪೊಲೀಸ್ ಬಲೆಗೆ
ಮಂಜೇಶ್ವರ: ಕಳವಿಗೆ ಹೊಂಚು ಹಾಕಿ ಮಾರಕಾಯುಧಗಳ ಸಹಿತ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಪೊಲೀಸರನ್ನು ಕಂಡು ಪರಾರಿಯಾದ ನಾಲ್ವರು ಆರೋಪಿಗಳ ಪೈಕಿ ಓರ್ವನನ್ನು ಮಂಜೇಶ್ವರ ಪೊಲೀಸರು ಬಲೆಗೆ ಹಾಕಿಕೊಂಡಿದ್ದಾರೆ. ಕಾಸರಗೋಡು ಸಮೀಪದ ನಿವಾಸಿಯಾದ ಈತ ಹಲವು ಕಳವು ಪ್ರಕರಣಗಳಲ್ಲಿ ಆರೋಪಿಯಾಗಿ ದ್ದಾನೆ ಎನ್ನಲಾಗುತ್ತಿದೆ. 2024 ಫೆಬ್ರವರಿ 8ರಂದು ಅಡ್ಯನಡ್ಕದ ಕರ್ನಾಟಕ ಬ್ಯಾಂಕ್ ಶಾಖೆ ಕಳವು ಪ್ರಕರಣದ ಆರೋಪಿ ಗಳಲ್ಲಿ ಈತನೂ ಒಳಗೊಂಡಿದ್ದಾನೆ. ಈತನ ಸಹಿತ ಕಳವು ತಂಡವನ್ನು ಪೊಲೀಸರು ಬಂಧಿಸಿದ್ದರೂ ಕಳವಿಗೀಡಾದ ಸೊತ್ತುಗಳನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಕಾಸರಗೋಡಿನ ಕಲಂದರ್, ಸುಳ್ಯ ಕೊಯ್ಲದ ರಫೀಕ್ ಯಾನೆ ಗೂಡಿನ ಬಳಿ ರಫೀಕ್, ಪೈವಳಿಕೆ ಬಾಯಾರಿನ ದಯಾನಂದ ಎಂಬಿವರನ್ನು ಅಡ್ಯನಡ್ಕ ಬ್ಯಾಂಕ್ ಕಳವು ಪ್ರಕರಣದಲ್ಲಿ ವಿಟ್ಲ ಪೊಲೀಸರು ಅಂದು ಸೆರೆಹಿಡಿದಿದ್ದರು. ಈ ಪೈಕಿ ಕಲಂದರ್ ವಿರುದ್ಧ ಕೇರಳ ಹಾಗೂ ಕರ್ನಾಟಕದಲ್ಲಿ ನಡೆದ ಹಲವು ಕಳವು ಪ್ರಕರಣ ಸಂಬಂಧ ಕೇಸುಗಳಿವೆ ಯೆಂದು ಪೊಲೀಸರು ತಿಳಿಸಿದ್ದಾರೆ.
ಆದಿತ್ಯವಾರ ಮುಂಜಾನೆ ದೈಗೋಳಿಯಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಆಗಮಿಸಿದ ಕಾರನ್ನು ನಿಲ್ಲಿಸುವಂತೆ ಸೂಚಿಸಲಾ ಗಿತ್ತು. ಆದರೆ ಕಾರು ನಿಲ್ಲಿಸದೆ ಪರಾರಿ ಯಾಗಿದ್ದು, ಕೂಡಲೇ ಪೊಲೀಸರು ಹಾಗೂ ನಾಗರಿಕರು ಬೆನ್ನಟ್ಟಿ ಕಾರಿಗೆ ತಡೆಯೊಡ್ಡಿ ದ್ದರು. ಈ ವೇಳೆ ಇಬ್ಬರನ್ನು ಸೆರೆಹಿಡಿ ಯಲಾಗಿದ್ದು, ನಾಲ್ಕು ಮಂದಿ ಓಡಿ ಪರಾರಿಯಾಗಿದ್ದರು. ಇದೇ ವೇಳೆ ಮೊನ್ನೆ ಸೆರೆಗೀಡಾದ ಕರ್ನಾಟಕ ತುಮಕೂರು ಜಿಲ್ಲೆ ಸಿರಾ ಗ್ರಾಮದ ಮೊಹಲ್ಲ ಕಚೇರಿ ಎಂಬಲ್ಲಿನ ಸಯ್ಯಿದ್ ಅಮಾನ್ (22), ಮಂಗಳೂರು ಉಳ್ಳಾಲ ಕೋಡಿ ಹೌಸ್‌ನ ಫೈಸಲ್ (36) ಎಂಬಿವರಿಗೆ ನ್ಯಾಯಾಲ ಯ ರಿಮಾಂಡ್ ವಿಧಿಸಿದೆ. ಇದೇ ಸಂದ ರ್ಭದಲ್ಲಿ ಹೆಚ್ಚಿನ ತನಿಖೆಗೊಳ ಪಡಿಸುವ ಉದ್ದೇಶದಿಂದ ಆರೋಪಿ ಸಯ್ಯಿದ್ ಅಮಾನ್‌ನನ್ನು ನ್ಯಾಯಾಲಯದ ಅನು ಮತಿಯೊಂದಿಗೆ ಎರಡು ದಿನಗಳ ಕಾಲಕ್ಕೆ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.