ದ್ವಿಚಕ್ರ ವಾಹನ ರಸ್ತೆಯ ಹೊಂಡಕ್ಕೆ ಬಿದ್ದು ಉಪ ತಹಶೀಲ್ದಾರ್‌ಗೆ ಗಾಯ

ಕಾಸರಗೋಡು: ರಸ್ತೆ ನಡುವೆ ಹೊಂಡದಲ್ಲಿ ದ್ವಿಚಕ್ರ ವಾಹನ ಸಿಲುಕಿ ಕೊಂಡು ಅಪಘಾತಕ್ಕೀಡಾಗಿ ಉಪ ತಹಶೀಲ್ದಾರ್ ಗಾಯಗೊಂಡ ಘಟನೆ ನಡೆದಿದೆ. ನೀಲೇಶ್ವರ ಪಡಿಞ್ಞಾಟ್ ಕೊಳುವಯಲಿನ ಪಿ.ವಿ. ತುಳಸಿ ರಾಜ್ ಉಪ ತಹಶೀಲ್ದಾರ್. ಇವರು ನಿನ್ನೆ ರಾತ್ರಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ನೀಲೇಶ್ವರ ಎಸ್‌ಬಿಐ ಶಾಖೆ ಮುಂದಿನ ರಸ್ತೆ ಮಧ್ಯೆ ಇದ್ದ ಹೊಂಡಕ್ಕೆ ಆ ವಾಹನ ಸಿಲುಕಿ ಅಲ್ಲೇ ಬಿದ್ದು ಗಾಯಗೊಂಡಿದ್ದಾರೆ. ಗಾಯಗೊಂಡ ಅವರನ್ನು ಹೊಸದುರ್ಗ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

You cannot copy contents of this page