ಧರ್ಮಸ್ಥಳ ಭಜನಾ ಕಮ್ಮಟದ ಪೂರ್ವಭಾವಿ ಸಭೆ

ಕಾಸರಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ನೇತೃತ್ವದಲ್ಲಿ ಸೆ.14ರಿಂದ 21ರ ವರೆಗೆ ಧರ್ಮಸ್ಥಳದಲ್ಲಿ ಜರಗಲಿರುವ 27ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆ ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಜರಗಿತು. ಧ.ಗ್ರಾ. ಯೋಜನೆಯ ದ.ಕ. ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಉದ್ಘಾ ಟಿಸಿದರು. ಪರಿಷತ್ ಕಾಸರಗೋಡು ವಲಯ ಅಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದರು. ಭಜನಾ ಪರಿಷತ್ ಗೌರವಾಧ್ಯಕ್ಷ ಜಯಾನಂದ ಕುಮಾರ್ ಹೊಸದುರ್ಗ ಮಾತನಾ ಡಿದರು. ಸಂತೋಷ್ ಪೂಜಾರಿ ಪ್ರಸ್ತಾಪಿಸಿದರು. ವೆಂಕಟ್ರಮಣ ಬಾಲಗೋಕುಲದ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಯೋಜನಾಧಿಕಾರಿ ದಿನೇಶ್ ಸ್ವಾಗತಿಸಿ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಸೌಮ್ಯಾ ವಂದಿಸಿದರು.

RELATED NEWS

You cannot copy contents of this page