ಧಾರ್ಮಿಕ ಮುಂದಾಳು ನಿಧನ
ಮಂಗಲ್ಪಾಡಿ: ಪ್ರತಾಪನಗರ ತಿಂಬರ ನಿವಾಸಿ ಧಾರ್ಮಿಕ ಮುಂದಾಳು, ನಿವೃತ ·್ರಒ^್ವ ಔ್ಣÇಔ್ವ% ರಾಮಕೃಷ್ಣ ಹೊಳ್ಳ (85) ನಿನ್ನೆ ಸಂಜೆ ಮನೆಯಲ್ಲಿ ಹೃದಯÁಘಾತದಿಂದ ನಿಧನರಾದರು. ಕಾಸರಗೋಡು ನ್ಯಾಯಾಲಯದಲ್ಲಿ ಉದ್ಯೋಗದಲ್ಲಿದ್ದು, ನಿವೃತ್ತಿ ಹೊಂದಿದ್ದರು. ಹಿರಿಯ ಕೃಷಿಕರೂ, ಆರ್.ಎಸ್.ಎಸ್ ಸಕ್ರಿಯ ಕಾರ್ಯಕರ್ತರಾಗಿದ್ದರು. ಅಲ್ಲದೆ ಪ್ರತಾಪನಗರ ಶ್ರೀ ಗೌರೀ ಗಣೇಶ ಮಂದಿರ, ಕುಬಣೂರು ಶ್ರೀ ಶಾಸ್ತಾವು ದೇವಸ್ಥಾನ ಸಹಿತ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಮಕ್ಕಳಾದ ಶಿವಶಂಕರ ಹೊಳ್ಳ, ಇಂದುಮತಿ, ಮಹಾಲಕ್ಷಿ÷್ಮÃ, ಸೊಸೆ ಭಾಗ್ಯಲಕ್ಷಿ÷್ಮ (ಮುಖ್ಯೋಪಧ್ಯಾಯಿನಿ, ಕಾಯರ್‌ಕಟ್ಟೆ ಶಾಲೆ) ಅಳಿಯಂದಿರಾದ ವಾಸುದೇವ, ರವೀಂದ್ರ, ಸಹೋದರ ನಾರಾಯಣ ಹೊಳ್ಳ, ಸಹೋದರಿಯರಾದ ಶ್ಯಾಮಲದೇವಿ, ಗೌರಿ, ಜಾಹ್ನವಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಪತ್ನಿ ಶಾರದಾ, ಸಹೋದರಿ ಮಹಾಲಕ್ಷಿ÷್ಮ ಈ ಹಿಂದೆ ನಿಧನರಾಗಿದ್ದಾರೆ. ಮನೆಗೆ ಸಂಘ ಪರಿವಾರದ ನೇತಾರರು, ಕಾರ್ಯಕರ್ತರು ಹಾಗೂ ಹಿತೈಷಿಗಳ ಸಹಿತ ಹಲವಾರು ಮಂದಿ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಅಂತ್ಯಸAಸ್ಕಾರ ನಿನ್ನೆ ರಾತ್ರಿ ಮನೆ ಪರಿಸರದಲ್ಲಿ ನಡೆಯಿತು.