ನಕಲಿ ಆನ್‌ಲೈನ್ ಟ್ರೇಡಿಂಗ್: ಒಂದು ಕೋಟಿ ರೂ. ಪಡೆದು ವಂಚಿಸಿದ ಉಪ್ಪಳ ನಿವಾಸಿ ಸೆರೆ
ವಡಗರ: ನಕಲಿ ಆನ್‌ಲೈನ್ ಟ್ರೇಡಿಂಗ್ ಮೂಲಕ ವಡಗರೆ ನಿವಾಸಿ ಯುವಕನಿಂದ ಒಂದು ಕೋಟಿ ರೂ. ಪಡೆದು ಬಳಿಕ ವಂಚಿಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ದಾಖಲುಗೊಂಡಿರುವ ಪ್ರಕರಣದ ಆರೋಪಿಯನ್ನು ವಡಗರೆ ಪೊಲೀಸರು ಬಂಧಿಸಿದ್ದಾರೆ. ಉಪ್ಪಳ ನಿವಾಸಿ ಪೆರುವಾಡು ಮಹಮ್ಮದ್ ಇರ್ಷಾದ್ (32) ಬಂಧಿತ ಆರೋಪಿ. ನಕಲಿ ವೆಬ್‌ಸೈಟ್ ಮೂಲಕ ಉತ್ತಮ ರೀತಿಯಲ್ಲಿ ಲಾಭ ನೀಡುವ ಭರವಸೆ ನೀಡಿ ಆರೋಪಿ ತನ್ನಿಂದ ಒಟ್ಟು 1 ಕೋಟಿ ರೂ. ಹಣ ಪಡೆದು ವಂಚಿಸಿ ರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಡಗರೆ ನಿವಾಸಿ ಆರೋ ಪಿಸಿದ್ದಾರೆ. ಬಳಿಕ ಆರೋಪಿ ವಿದೇಶಕ್ಕೆ ಹೋಗಿದ್ದನು. ಅಲ್ಲಿಂದ ಆತ ಊರಿಗೆ ಹಿಂತಿರುಗಿ ಬರುವ ದಾರಿ ಮಧ್ಯೆ ಮಂಗಳೂರು ವಿಮಾನ ನಿಲ್ದಾಣದಿಂದ ಆತನನ್ನು ವಡಗರೆ ಪೊಲೀಸರು ಬಂಧಿಸಿದ್ದಾರೆ.