ನಕಲಿ ಆಪ್ ಮೂಲಕ ೫೫ ಲಕ್ಷ ರೂ. ಲಪಟಾವಣೆ
ಕಾಸರಗೋಡು: ನಕಲಿ ಆಪ್ ಮೂಲಕ ಬ್ಯಾಂಕ್ ಖಾತೆಯಿಂದ ೫೫ ಲಕ್ಷ ರೂ. ಲಪಟಾಯಿಸಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ನೀಲೇಶ್ವರ ಚಿರಪುರಂ ಅಲನ್ ಕೇಳನ್ ನಿವಾಸಿ ಕೆ.ಜೆ. ಜೋಸೆಫ್ ಈ ಬಗ್ಗೆ ನೀಲೇಶ್ವರ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ಸೈಬರ್ ಸೆಲ್ನ ಸಹಾಯದಿಂದ ತನಿಖೆ ಆರಂಭಿಸಿದ್ದಾರೆ.
ಎಸ್ಬಿಐ ಸಿಬ್ಬಂದಿಗಳಾಗಿರುವ ಎಚ್ಆರ್ಎಂ ಸೈಟ್ನ ನಕಲಿ ಅಪ್ಲಿಕೇಶನ್ ತಯಾರಿಸಿ ತನ್ನ ಎರಡು ಬ್ಯಾಂಕ್ ಖಾತೆಗಳಿಂದಾಗಿ ತನಗೆ ತಿಳಿಯದೆ ಹಣ ಎಗರಿಸಲಾಗಿದೆ. ಕಳೆದ ಎಪ್ರಿಲ್ ೭ರಂದು ತನ್ನ ಎರಡು ಬ್ಯಾಂಕ್ ಖಾತೆಗಳಿಂದಾಗಿ ೧,೧೧,೩೦೦ ರೂ. ಹಾಗೂ ಅದರ ಬೆನ್ನಲ್ಲೇ ೧,೧೮,೦೦೦ ರೂ. ಎಗರಿಸಲಾಗಿದೆ. ನಂತರ ತನ್ನ ಖಾಯಂ ಠೇವಣಿ ಖಾತೆಯಿಂದ ಇನ್ನೊಂದು ಖಾತೆಗೆ ಎರಡು ಬಾರಿಯಾಗಿ ತಲಾ ೩,೨೫,೦೦೦ ರೂ.ನಂತೆಯೂ ಟ್ರಾನ್ಸ್ ಮಾಡಲಾಗಿ ದೆ. ಹೀಗೆ ಒಟ್ಟು ೫೫ ಲಕ್ಷ ರೂ.ವನ್ನು ತನ್ನ ಬ್ಯಾಂಕ್ ಖಾತೆಯಿಂದ ಎಗರಿಸಲಾಗಿದೆ ಯೆಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ ಜೋಸೆಫ್ ತಿಳಿಸಿದ್ದಾರೆ.