ನಕಲಿ ಗುರುತು ಚೀಟಿ ಬಳಕೆ ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷರ ತನಿಖೆ
ತಿರುವನಂತಪುರ: ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ನಕಲಿ ಗುರುತು ಚೀಟಿ ಬಳಸ ಲಾಗಿದೆಯೆಂಬ ಪ್ರಕರಣಕ್ಕೆ ಸಂ ಬಂಧಿಸಿ ನೂತನ ರಾಜ್ಯ ಅಧ್ಯಕ್ಷ ರಾಹುಲ್ ಮಾಂಕುಟ್ಟತ್ತಿಲ್‌ರನ್ನು ಪೊಲೀಸರು ಇಂದು ತನಿಖೆಗೊಳ ಪಡಿಸಲಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗೆ ಅಡೂರ್ ನಿಂದ ಕಸ್ಟಡಿಗೆ ತೆಗೆದ ನಾಲ್ವರು ಯೂತ್ ಕಾಂಗ್ರೆಸ್ ಕಾರ್ಯ ಕರ್ತರ ಬಂಧನ ದಾಖಲಿ ಸಲಾಗಿದೆ.
ಅಭಿವಿಕ್ರಂ, ಬಿನಿಲ್ ಬಿನು, ಫೈನಿ ನೈನಾನ್, ವಿಕಾಸ್ ಕೃಷ್ಣ ಎಂಬಿವರು ಬಂಧಿತ ವ್ಯಕ್ತಿಗಳಾಗಿ ದ್ದಾರೆ. ಇವರಿಂದ೨೪ ನಕಲಿ ಗುರುತು ಚೀಟಿಗಳನ್ನು ಪತ್ತೆಹಚ್ಚಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.