ನಕಲಿ ಚಿನ್ನಾಭರಣ ಅಡವಿರಿಸಿ ವಂಚನೆ ಯತ್ನ: ಇಬ್ಬರು ಸೆರೆ

ಕಾಸರಗೋಡು: ತೃಕರಿಪುರದಲ್ಲಿ ನಕಲಿ ಚಿನ್ನಾಭರಣವನ್ನು ಅಡವಿಟ್ಟು ಹಣ ಪಡೆಯಲು ಯತ್ನ ನಡೆದಿದೆ. ಈ ಘಟನೆಯಲ್ಲಿ ಇಬ್ಬರನ್ನು ಸೆರೆ ಹಿಡಿಯಲಾಗಿದೆ. ತೃಕರಿಪುರ ಆಯಿಟ್ಟಿ ನಿವಾಸಿ ಜಾಫರ್‌ಖಾನ್, ಆಯಿಟ್ಟಿ ಹೌಸ್‌ನ ಮುನಿರುದ್ದೀನ್ ಎಂಬಿವರನ್ನು ಚಂದೇರ ಎಸ್‌ಐ ವಿ. ಜಿಯೋಸದಾನಂದನ್ ನೇತೃತ್ವದಲ್ಲಿ ಸೆರೆ ಹಿಡಿಯಲಾಗಿದೆ.  ನಿನ್ನೆ ಸಂಜೆ ತೃಕರಿಪುರ ಫಾರ್ಮರ್ಸ್ ಬ್ಯಾಂಕ್‌ನಲ್ಲಿ ಘಟನೆ ನಡೆದಿದೆ. ಬ್ಯಾಂಕ್‌ನ ವ್ಯವಹಾರ ಸಮಯ ಕೊನೆಗೊಳ್ಳುವುದಕ್ಕಿಂತ ಸ್ವಲ್ಪ ಮುಂಚೆ ತಲುಪಿದ ಆರೋಪಿಗಳು 24.900 ಗ್ರಾಂ ತೂಕದ ನಕಲಿ ಚಿನ್ನಾಭರಣಗಳನ್ನು ಅಡವಿರಿಸಲು ಯತ್ನಿಸಿದ್ದರು. ಬ್ಯಾಂಕ್ ಎಂಡಿ ನೋರ್ತ್ ತೃಕರಿಪುರ, ಕೊಯೊಂಗರದ ಸಿ. ಸೇತುಮಾಧವನ್‌ರ ದೂರಿನಂತೆ ಕೇಸು ದಾಖಲಿಸಲಾಗಿದೆ. ಬಂಧಿತರಾದ ಆರೋಪಿಗಳಿಗೆ ಇನ್ಯಾವುದಾದರೂ ವಂಚನೆ ಪ್ರಕರಣಗಳಲ್ಲಿ ಸಂಬಂಧವಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page