ನಕಲಿ ಸಹಿ ಹಾಕಿ ಸರ್ಟಿಫಿಕೆಟ್ ನೀಡಿದ ದೂರಿನಂತೆ ನಗರಸಭೆಯ ಮೂವರು ಸಿಬ್ಬಂದಿಗಳ ವಿರುದ್ಧ ಕೇಸು ದಾಖಲು
ಕಾಸರಗೋಡು: ಜಸ್ಟಿನ್ ಪಿ.ಎ.ಯವರು ಕಾಸರಗೋಡು ನಗರಸಭಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ಅವರ ನಕಲಿ ಸಹಿ ಹಾಕಿ ಒಕ್ಯೂಪೆನ್ಸಿ ಸರ್ಟಿಫಿಕೆಟ್ ತಯಾರಿಸಿದ ದೂರಿನಂತೆ ಕಾಸರಗೋಡು ನಗರಸಭಾ ಕಚೇರಿಯ ಮೂವರು ಸಿಬ್ಬಂದಿಗಳ ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ನಗರಸಭಾ ಕಚೇರಿಯ ಸೆಕ್ಷನ್ ಕ್ಲರ್ಕ್ ಪ್ರಮೋದ್ ಕುಮಾರ್, ರೆವೆನ್ಯೂ ಇನ್ಸ್‌ಪೆಕ್ಟರ್‌ಗಳಾದ ರಂಜಿತ್ ಮತ್ತು ಎ.ಪಿ. ಜೋರ್ಜ್ ಎಂಬವರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಆರೋ ಪಿಗಳ ಪೈಕಿ ಎ.ಪಿ. ಜೋರ್ಜ್ ಇತ್ತೀ ಚೆಗೆ ಎರ್ನಾಕುಳಂಗೆ ವರ್ಗಾವಣೆಗೊಂಡಿ ದ್ದರು.ಕಾಸರಗೋಡು ನಗರಸಭಾ ಕಾರ್ಯ ದರ್ಶಿಯಾಗಿದ್ದ ಆಲಪ್ಪುಳ ಪಾಡಿರಾಪಳ್ಳಿ ನಿವಾಸಿ ಜಸ್ಟಿನ್ ಪಿ.ಎ. ನೀಡಿದ ದೂರಿನಂತೆ ಈ ಪ್ರಕರಣ ದಾಖಲಿಸಲಾಗಿದೆ.
ನಾನು ಕಾಸರಗೋಡು ನಗರಸಭಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ವೇಳೆ 2023 ಅಕ್ಟೋಬರ್ 11ರಿಂದ 2024 ಡಿಸೆಂಬರ್ 9ರ ಅವಧಿಯಲ್ಲಿ ನನ್ನ ನಕಲಿ ಸಹಿ ಹಾಕಿ ಕಟ್ಟಡಕ್ಕಿರುವ ಅಕ್ಯುಪೆನ್ಸಿ ಸರ್ಟಿಫಿಕೆಟ್ ತಯಾರಿಸಲಾಗಿದೆ ಎಂದೂ ಪೊಲೀಸರಿಗೆ ನೀಡಲಾದ ದೂರಿನಲ್ಲಿ ಜಸ್ಟಿನ್ ಆರೋಪಿಸಿದ್ದಾರೆ. ಅದಕ್ಕೆ ಸಂಬಂಧಿಸಿ ಪೊಲೀಸರು ಈ ಮೂವರು ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.