ನಗರದ ಆಟೋ ಚಾಲಕ ಕುಸಿದು ಬಿದ್ದು ಮೃತ್ಯು
ಕಾಸರಗೋಡು: ನಗರದಲ್ಲಿ ಆಟೋಚಾಲಕನಾಗಿದ್ದ ವ್ಯಕ್ತಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮಾಯಿಪ್ಪಾಡಿ ಬಿ.ಟಿ ರೋಡ್ ಆನಂದ ನಿಲಯದ ಚಂದ್ರಮೋಹನನ್ (54) ಎಂಬವರು ಮೃತಪಟ್ಟ ವ್ಯಕ್ತಿ. ನಿನ್ನೆ ಬೆಳಿಗ್ಗೆ ವಿದ್ಯಾರ್ಥಿಗಳನ್ನು ಶಾಲೆಗೆ ತಲುಪಿಸಿದ ಬಳಿಕ ಇವರು ಮನೆಗೆ ಮರಳಿದ್ದರು. ಈ ವೇಳೆ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ದಿ| ಆನಂದ- ನಾರಾಯಣಿ ದಂಪತಿಯ ಪುತ್ರನಾದ ಮೃತರು ಪತ್ನಿ ಸುಮತಿ, ಮಕ್ಕಳಾದ ನಂದು, ರಂಜಿಮ, ಸಹೋದರ-ಸಹೋದರಿಯರಾದ ಸದಾಶಿವನ್, ಶ್ರೀಧರನ್, ಇಂದಿರ, ಸುಜಾತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.