ನಗರದ ಆಟೋ ಚಾಲಕ ಹೃದಯಾಘಾತದಿಂದ ನಿಧನ
ಕಾಸರಗೋಡು: ನಗರದ ಆಟೋ ಚಾಲಕ ಹೃದಯಾಘಾ ತದಿಂದ ನಿಧನಹೊಂದಿದರು. ಮೀಪುಗುರಿ ಶ್ರೀ ದುರ್ಗಾಪರಮೇ ಶ್ವರಿ ಕ್ಷೇತ್ರ ಬಳಿಯ ಸಾಕ್ಷಿ ನಿಲಯದ ವಿನಯ ಕುಮಾರ್ (55) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ 12 ಗಂಟೆ ವೇಳೆ ಮನೆಯಲ್ಲಿ ನಿದ್ರಿಸಿದ್ದ ಇವರಿಗೆ ಹೃದಯಾಘಾತವುಂ ಟಾಗಿತ್ತು. ಕೂಡಲೇ ಆಸ್ಪತ್ರೆಗೆ ತಲುಪಿಸಿ ದರೂ ಜೀವ ರಕ್ಷಿಸಲಾಗಲಿಲ್ಲ. ಇವರು ಹಲವು ವರ್ಷಗಳಿಂದ ಕಾಸರಗೋಡು ನಗರದಲ್ಲಿ ಆಟೋ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು.
ದಿ| ವಿಠಲ ಎಂಬವರ ಪುತ್ರನಾದ ಮೃತರು ತಾಯಿ ಭವಾನಿ, ಪತ್ನಿ ಸರಸ್ವತಿ, ಮಕ್ಕಳಾದ ಸಾಕ್ಷಿ, ಸುಖಿ,ಸಹೋದರರಾದ ಗಣೇಶ್, ನಾಗರಾಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.