ನಗರದ ಕ್ವಾರ್ಟರ್ಸ್‌ನಲ್ಲಿ ಘರ್ಷಣೆ ವಲಸೆ ಕಾರ್ಮಿಕ ಸಾವು: ಪರಾರಿಯಾದ ಆರು ಮಂದಿ ಪೈಕಿ ನಾಲ್ವರು ಒಟ್ಟಪಾಲಂನಿಂದ ಪೊಲೀಸ್ ಕಸ್ಟಡಿಗೆ
ಕಾಸರಗೋಡು: ನಗರದ ಆನೆಬಾಗಿ ಲಿನಲ್ಲಿ ವಲಸೆ ಕಾರ್ಮಿಕರು ವಾಸಿಸುತ್ತಿ ರುವ ಕ್ವಾರ್ಟರ್ಸ್‌ನಲ್ಲಿ ಕಾರ್ಮಿಕರ ಮಧ್ಯೆ ಘರ್ಷಣೆ ಉಂಟಾಗಿ ಅದರಲ್ಲಿ ಓರ್ವ ವಲಸೆ ಕಾರ್ಮಿಕ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತನನ್ನು ಪಶ್ಚಿಮ ಬಂಗಾಲ ಬರೋಘರಿಯಾ ಜಿಲ್‌ಫೈಗುರಿ, ಭಿಮ್ಚಿಯಾಬಾರ್ ಘರಿಯಾ ನಿವಾಸಿ ಸುಭಾಷ್ ರಾಯ್ ಎಂಬವರ ಮಗ ಸುಶಾಂತ್ ರಾಯ್ (28) ಎಂದು ಗುರುತಿಸಲಾಗಿದೆ.
ಈತ ಮತ್ತು ಇತರ ಆರು ಮಂದಿ ವಲಸೆ ಕಾರ್ಮಿಕರು ಕಳೆದ ಮೂರು ತಿಂಗಳ ಹಿಂದೆಯಷ್ಟೇ ಕೆಲಸಕ್ಕಾಗಿ ಕಾಸರಗೋಡಿಗೆ ಆಗಮಿಸಿ ನಗರದ ಆನೆಬಾಗಿಲಿನ ಕ್ವಾರ್ಟರ್ಸ್‌ವೊಂ ದರಲ್ಲಿ ವಾಸಿಸುತ್ತಿದ್ದರು. ನಿನ್ನೆರಾತ್ರಿ ಆ ಕ್ವಾರ್ಟ ರ್ಸ್‌ನಲ್ಲಿ ಅವರಿಬ್ಬರ ಮಧ್ಯೆ ಭಾರೀ ವಾಗ್ವಾದ ಹಾಗೂ ಘರ್ಷಣೆ ನಡೆದಿದ್ದು, ಅದರಲ್ಲಿ ಸುಶಾಂತ್ ರಾಯ್ ಸಾವನ್ನಪ್ಪಿ ರು ವುದಾಗಿ ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದು ತಿಳಿಸಲಾಗಿದೆ. ಹಲ್ಲೆಗೊಳಗಾಗಿ ಆತ ಸಾವನ್ನಪ್ಪಿರಬಹುದೆಂದೂ ಮೃತದೇಹದ ಮೇಲೆ ಯಾವುದೇ ಇರಿತದ ಅಥವಾ ಇತರ ಗಾಯಗಳು ಪತ್ತೆಯಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಇದರಂತೆ ಪೊಲೀಸರು ಪ್ರಕರಣ ದಾಖಲಿಸಿ ಸಮಗ್ರ ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರ ಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾ ಗಿದೆ. ಮರಣೋತ್ತರ ಪರೀಕ್ಷೆಯ ವರದಿ ಲಭಿಸಿದ ಬಳಿಕವಷ್ಟೇ ಸಾವಿನ ಸ್ಪಷ್ಟ ಕಾರಣ ತಿಳಿಯಬಹುದೆಂದು ಪೊಲೀಸರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮೃತ ಶಶಾಂಕ್‌ನ ಜತೆಗೆ ಆ ಕ್ವಾರ್ಟರ್ಸ್ ನಲ್ಲಿದ್ದ ಇತರ ಆರು ಮಂದಿ ಅಲ್ಲಿಂದ ತಪ್ಪಿಸಿಕೊಂಡಿದ್ದು, ಈ ಪೈಕಿ ನಾಲ್ವರನ್ನು ರೈಲಿನಿಂದ ಒಟ್ಟಂಪಾಲದಿಂದ ಪೊ ಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಾಸರಗೋಡು ಪೊಲೀಸರು ಅಲ್ಲಿಗೆ ಸಾಗಿ ಅವರನ್ನು ಕಾಸರಗೋಡಿಗೆ ತರುವ ತಯಾರಿಯಲ್ಲಿ ತೊಡಗಿದ್ದಾರೆ. ಇತರ ಇಬ್ಬರು ಇನ್ನೂ ನಾಪತ್ತೆಯಾಗಿದ್ದರು. ಅವರ ಪತ್ತೆಗಾಗಿರುವ ಶೋಧ ಕಾರ್ಯಾಚರಣೆಯನ್ನು ಪೊಲೀಸರು ಮುಂದುವರಿಸಿದ್ದಾರೆ. ಕಸ್ಟಡಿಗೊಳಗಾದವರನ್ನು ತೀವ್ರ ವಿಚಾರಣೆಗೊಳಪಡಿಸಿದ ಬಳಿಕವಷ್ಟೇ ಅವರ ಮಧ್ಯೆ ಘರ್ಷಣೆ ಉಂಟಾದ ಕಾರಣದ ಬಗ್ಗೆ ತಿಳಿಯಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ.