ನಗ್ನಪೂಜೆಗೆ ಯುವತಿಯನ್ನು ಒತ್ತಾಯಿಸಿದ ಬಗ್ಗೆ ದೂರು: ಇಬ್ಬರ ಸೆರೆ
ಕಾಸರಗೋಡು: ನಗ್ನ ಪೂಜೆಗಾಗಿ ಯುವತಿಯ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದ ದೂರಿನಂತೆ ಇಬ್ಬರ ವಿರುದ್ಧ ಪೊಲೀ ಸರು ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿದ್ದಾರೆ. ತಾಮರಶ್ಶೇರಿ ಅಡಿವಾರಂ ಮೇಲೇಪೊಟ್ಟಿಕೈ ನಿವಾಸಿ ಪಿ.ಕೆ. ಪ್ರಕಾಶನ್ (46) ಮತ್ತು ತಾಮರಶ್ಶೇರಿ ಅಡಿವಾರಂ ವಾಳಯಿಲ್ ವೀಟಿಲ್ ವಿ. ಶಮೀರ್ (34) ಬಂಧಿತರಾದ ಆರೋಪಿಗಳು.
ತನ್ನ ಕುಟುಂಬ ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹಾಗೂ ಸರ್ವಾಂಗೀಣ ಅಭಿವೃದ್ಧಿಗಾಗಿ ನಗ್ನಪೂಜೆ ನಡೆಸುವಂತೆ ಆರೋಪಿಗಳಿಬ್ಬರು ನನ್ನನ್ನು ಸಂಪರ್ಕಿಸಿ ಒತ್ತಾಯಿಸಿದ್ದರು. ಅದನ್ನು ನಾನು ನಿರಾಕರಿಸಿದ್ದೆ. ಆ ಬಳಿಕವೂ ಆರೋಪಿಗಳು ಪದೇ ಪದೇ ನನ್ನನ್ನು ಸಂಪರ್ಕಿಸಿ ನಗ್ನ ಪೂಜೆಗಾಗಿ ನಿರಂತg ವಾಗಿ ಒತ್ತಾಯಿಸತೊಡಗಿದರು. ಮಾತ್ರವಲ್ಲ ಅದರ ಹೆಸರಲ್ಲಿ ಬಳಿಕ ಅವರು ನನಗೆ ಮಾನಸಿಕ ಕಿರುಕುಳ ನೀಡತೊಡಗಿದರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಯುವತಿ ಆರೋಪಿಸಿದ್ದಾಳೆ. ಅದರಂತೆ ತಾಮರಶ್ಶೇರಿ ಪೊಲೀಸರು ಆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಎಸ್‌ಐ ಎ ಸಾಯೂಜ್ ಕುಮಾರ್ ನೇತೃತ್ವದ ಪೊಲೀಸರು ಕೊನೆಗೆ ಆರೋಪಿಗಳನ್ನು ಬಂಧಿಸಿದ್ದಾರೆ.