ನಟಿಗೆ ಕಿರುಕುಳ: ನಟ ಸಿದ್ದಿಕ್‌ಗಾಗಿ ಪೊಲೀಸ್ ಹುಡುಕಾಟ

ತಿರುವನಂತಪುರ: ನಟಿಗೆ ಕಿರುಕುಳ ನೀಡಿದ ಆರೋಪದಂತೆ ಪೊಲೀಸರು ಕೇಸು ದಾಖಲಿಸಿ ಕೊಂಡ ಹಿನ್ನೆಲೆಯಲ್ಲಿ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿ ನಾಲ್ಕು ದಿನಗಳಾದರೂ ನಟ ಸಿದ್ದಿಕ್‌ರನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಹೊಟೇಲ್‌ಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಗಳೂ ವಿಫಲಗೊಂಡಿತು. ಇದರಿಂದ ನಟ ಹಾಗೂ ಅವರ ಸ್ನೇಹಿತರ ಮನೆಗಳ ಮೇಲೆ ಪೊಲೀಸರು ನಿಗಾ ಇರಿಸಿದ್ದಾರೆ. ಇದೇ ವೇಳೆ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದುದರ ವಿರುದ್ಧ ಸಿದ್ದಿಕ್ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್  ಸೋಮವಾರ ಪರಿಗಣಿಸಲಿದೆ. ಆದ್ದರಿಂದ ಅದುವರೆಗೆ ತಲೆಮರೆಸಿಕೊಂಡಿರಲು ನಟ ನಿರ್ಧರಿಸಿರುವುದಾಗಿ ಸೂಚನೆ ಲಭಿಸಿದೆ ಎನ್ನಲಾಗಿದೆ. ಅದಕ್ಕಿಂತ ಮೊದಲು ಪೊಲೀಸರು ಸೆರೆ ಹಿಡಿದಲ್ಲಿ ರಿಮಾಂಡ್‌ನಲ್ಲಿರಬೇಕಾಗಿ ಬರಲಿದೆ ಎಂಬ ಆತಂಕವೂ ಸಿದ್ದಿಕ್‌ಗಿದೆ ಎನ್ನಲಾಗುತ್ತಿದೆ. ಆದರೆ ಸೋಮವಾರವರೆಗೆ ಪೊಲೀಸರು ಕಾಯುವರೇ ಅಥವಾ ಅದಕ್ಕಿಂತ ಮೊದಲೇ ಸೆರೆ ಹಿಡಿಯುವರೇ ಎಂದು ಇನ್ನಷ್ಟೇ ತಿಳಿಯಬೇಕಾಗಿದೆ.

You cannot copy contents of this page