ನಟಿಗೆ ಕಿರುಕುಳ : ನಟ ಸಿದ್ಧಿಕ್ರ ನಿರೀಕ್ಷಣಾ ಜಾಮೀನು ಅರ್ಜಿ ಹೈಕೋರ್ಟ್ನಿಂದ ತಿರಸ್ಕೃತ; ಬಂಧನ ಸಾಧ್ಯತೆ
ಕೊಚ್ಚಿ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನಟ ಸಿದ್ಧಿಕ್ರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟು ತಿರಸ್ಕರಿಸಿದೆ. ತಿರುವನಂತಪುರ ಮ್ಯೂಸಿಯಂ ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ಸಿದ್ಧಿಕ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಅದನ್ನು ಹೈಕೋರ್ಟ್ ತಿರಸ್ಕರಿಸಿದ್ದಾರೆ. ತನ್ನ ವಿರುದ್ಧದ ಆರೋಪಗಳು ಆಧಾರಹಿತವೆಂದೂ, ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕೆಂದು ಸಿದ್ಧಿಕ್ ಆಗ್ರಹಪಟ್ಟಿದ್ದರು. ಆದರೆ ಈ ವಿಷಯಗಳನ್ನು ತಿರಸ್ಕರಿಸಿ ಹೈಕೋರ್ಟು ನಿರೀಕ್ಷಣಾ ಜಾಮೀನು ನಿಷೇಧಿಸಿದೆ. ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಬಂಧನ ಕ್ರಮಗಳನ್ನು ಸಿದ್ಧಿಕ್ ಎದುರಿಸಬೇಕಾಗಿ ಬರಲಿದೆ ಎಂಬ ಸೂಚನೆಯಿದೆ. ಪ್ರಕರಣದ ಮುಂದಿನ ಕ್ರಮದಂಗವಾಗಿ ಸಿದ್ಧಿಕ್ರನ್ನು ಕಸ್ಟಡಿಗೆ ತೆಗೆದು ತನಿಖೆ ನಡೆಸಬೇಕೆಂಬುದಾಗಿ ಪ್ರಾಸಿಕ್ಯೂಷನ್ ನ್ಯಾಯಾಲ ಯದಲ್ಲಿ ತಿಳಿಸಿದೆ.
2016 ಜನವರಿ 28ರಂದು ಸಿದ್ಧಿಕ್ ಕಿರುಕುಳ ನೀಡಿರುವುದಾಗಿ ನಟಿ ಆರೋಪಿಸಿದ್ದಳು. ನಿಳ ಥಿಯೇಟರ್ನಲ್ಲಿ ಸಿನಿಮಾ ರಿವ್ಯೂ ಮುಗಿದು ಮರಳಿದ ಬಳಿಕ ತಿರುವನಂತಪುರದ ಮಸ್ಕತ್ ಹೋಟೆಲ್ನಲ್ಲಿ ಬಲಪ್ರಯೋಗಿಸಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ. ಒಂದೂವರೆ ತಿಂಗಳ ಕಾಲ ನಡೆದ ತನಿಖೆಯಲ್ಲಿ ದೂರುದಾತೆಯ ಹೇಳಿಕೆಯನ್ನು ಸಾಬೀತುಪಡಿಸುವ ರೀತಿಯ ಪುರಾವೆ ಪ್ರತ್ಯೇಕ ತನಿಖೆ ತಂಡಕ್ಕೆ ಲಭಿಸಿದೆ. ಜಾಮೀನು ಲಭಿಸದ ಹಿನ್ನೆಲೆಯಲ್ಲಿ ತನಿಖೆಯ ಅಂಗ ವಾಗಿ ಮುಂದಿನ ಕ್ರಮಗಳನ್ನು ತನಿಖಾ ತಂಡ ಶೀಘ್ರ ಆರಂಭಿ ಸಲಿದೆ ಎಂದು ತಿಳಿದು ಬಂದಿದೆ.