ನಟಿಯೊಂದಿಗೆ ಲೈಂಗಿಕ ಕಿರುಕುಳ ಪ್ರಕರಣ: ನಟರಾದ ಮುಖೇಶ್, ಇಡವೇಳ ಬಾಬುರಿಗೆ ನಿರೀಕ್ಷಣಾ ಜಾಮೀನು

ಕೊಚ್ಚಿ: ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಮಲೆಯಾಳ ಸಿನಿಮಾ ನಟರಾದ ಎಂ. ಮುಖೇಶ್ (ಶಾಸಕ) ಮತ್ತು ಇಡವೇಳ  ಬಾಬುರಿಗೆ ಎರ್ನಾಕುಳಂ ಜಿಲ್ಲಾ ಸೆಶನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನಿರೀಕ್ಷಣಾ ಜಾಮೀನು ಕೋರಿ ಈ ಇಬ್ಬರು ನಟರು ಸಲ್ಲಿಸಿದ  ಅರ್ಜಿ ಮೇಲಿನ ವಾದ  ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.  ಇದೇ ರೀತಿಯ ಪ್ರಕರಣದಲ್ಲಿ  ಆರೋಪಿಯಾಗಿರುವ ಕಾಂಗ್ರೆಸ್ ನೇತಾರ ನ್ಯಾಯವಾದಿ ವಿ.ಎಸ್. ಚಂದ್ರಶೇಖರನ್ ಕೂಡಾ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಅದರ ವಾದ ನ್ಯಾಯಲಯದಲ್ಲಿ ಮುಂದುವರಿಯುತ್ತಿದೆ. ನಿರೀಕ್ಷಣಾ ಜಾಮೀನು ಮಂಜೂರಾಗಿರುವ ಹಿನ್ನೆಲೆಯಲ್ಲಿ ಮುಖೇಶ್ ಮತ್ತು ಇಡವೇಳ ಬಾಬು ಈಗ ಅಲ್ಪ ನಿರಾಳಗೊಂಡಿದ್ದಾರೆ. ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಹಿನ್ನೆಲೆಯಲ್ಲಿ ಮುಖೇಶ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿಪಕ್ಷಗಳ ಬೇಡಿಕೆಗಳು ನ್ಯಾಯಾಲಯದ ತೀರ್ಪಿನಿಂದಾಗಿ ಈಗ ತಣ್ಣಗಾಗತೊಡಗಿದೆ.

You cannot copy contents of this page