ನಟ ಜಯಸೂರ್ಯ ವಿರುದ್ಧ ಇನ್ನೊಂದು ಪ್ರಕರಣ ದಾಖಲು

ತಿರುವನಂತಪುರ: ನಟಿಯೋ ರ್ವೆಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಮಲೆಯಾಳಂ ಸಿನಿಮಾದ ನಾಯಕನಟ ಜಯಸೂರ್ಯನ ವಿರುದ್ಧ ಪೊಲೀಸರು ಇನ್ನೊಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

2017ರಲ್ಲಿ ತೊಡುಪುಳದಲ್ಲಿ ಸಿನಿಮಾ ಚಿತ್ರೀಕರಣ ಸೆಟ್‌ನಲ್ಲಿ ಜಯಸೂರ್ಯ ತನಗೆ ಲೈಂಗಿಕ ಕಿರುಕುಳ ನೀಡಲೆತ್ನಿಸಿರುವುದಾಗಿ ಆರೋಪಿಸಿ ತಿರುವನಂತಪುರದ ನಟಿಯೋರ್ವೆ ನೀಡಿದ ದೂರಿನಂತೆ ತೊಡುಪುಳ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಇದರ ಹೊರತಾಗಿ 2008ರಲ್ಲಿ ಬಾಲಚಂದ್ರನ್ ಮೆನೋನ್ ನಿರ್ದೇಶನದ ಮಲೆಯಾಳಂ ಸಿನಿಮಾ ವೊಂದರ ಚಿತ್ರೀಕರಣ ತಿರುವನಂತಪುರದ ಸೆಕ್ರೆಟರಿಯೇಟ್‌ನಲ್ಲಿ ನಡೆಯುತ್ತಿದ್ದ ವೇಳೆ  ಅಲ್ಲಿ ಜಯಸೂರ್ಯ ತನಗೆ ಲೈಂಗಿಕ ಕಿರುಕುಳ ನೀಡಲೆತ್ನಿಸಿದ್ದರೆಂದು ಆರೋಪಿಸಿ ನಟಿಯೋರ್ವೆ ನೀಡಿದ ದೂರಿನಂತೆ ತಿರುವನಂತಪುರ ಕಂಟೋನ್ಮೆಂಟ್ ಪೊಲೀಸರು ಜಯಸೂರ್ಯರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಅದಾದ ಬೆನ್ನಲ್ಲೇ ಅದೇ  ರೀತಿಯ ದೂರಿನಂತೆ ತೊಡುಪುಳ ಪೊಲೀಸ್ ಠಾಣೆಯಲ್ಲ್ಲೂ ಜಯಸೂರ್ಯನ ವಿರುದ್ಧ ಇನ್ನೊಂದು ಪ್ರಕರಣ ದಾಖಲುಗೊಂಡಿದೆ.

You cannot copy contents of this page