ನಟ ನಿವಿನ್ ಪೋಲಿ ವಿರುದ್ಧ ಯುವತಿ ದೂರು: ದುಬಾಯಲ್ಲಿ ಕಿರುಕುಳ ನೀಡಿರುವುದಾಗಿ ಹೇಳಿದ ಸಮಯ ಯುವತಿ ಕೇರಳದಲ್ಲಿದ್ದಳೆಂಬ ಮಾಹಿತಿ
ಕೊಚ್ಚಿ: ಸಿನಿಮಾ ನಟ ನಿವಿನ್ ಪೋಲಿ ವಿರುದ್ಧ ಯುವತಿಯೋರ್ವೆ ನೀಡಿದ ಲೈಂಗಿಕ ಕಿರುಕುಳ ಆರೋಪದಲ್ಲಿ ಸತ್ಯಾವಸ್ಥೆ ಇದೆಯೇ ಇಲ್ಲವೇ ಎಂಬ ಬಗ್ಗೆ ಸಂಶಯಗಳು ಹುಟ್ಟಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಆ ಕುರಿತಾಗಿ ಸಮಗ್ರ ತನಿಖೆಗೆ ಪೊಲೀಸರು ನಿಧರಿಸಿದ್ದಾರೆ.
ದುಬಾಯ ಹೋಟೆಲ್‌ನಲ್ಲಿ 2023 ನವಂಬರ್, ಡಿಸೆಂಬರ್ ತಿಂಗಳುಗಳಲ್ಲಿ ನಟ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಯುವತಿ ಆರೋಪಿಸಿದ್ದಾಳೆ. ಆದರೆ ಈ ತಿಂಗಳುಗಳಲ್ಲಿ ಯುವತಿ ಕೇರಳದಲ್ಲಿ ದ್ದಳು ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಸಂಶಯ ನಿವಾರಣೆ ಗಾಗಿ ಪ್ರಯಾಣ ದಾಖಲೆಗಳನ್ನು ಪರಿಶೀಲಿಸುವುದರೊಂದಿಗೆ ಹೋಟೆಲ್ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲು ನಿರ್ಧರಿಸಲಾಗಿದೆ.
2021ರ ಬಳಿಕ ನಿವಿನ್ ಪೋಲಿ ಯುವತಿ ತಿಳಿಸಿದ ಹೋಟೆಲ್‌ನಲ್ಲಿ ವಾಸಿಸಿಲ್ಲವೆಂದೂ ಪೊಲೀಸರಿಗೆ ಲಭಿಸಿದ ಮಾಹಿತಿ ಎಂದು ತಿಳಿದುಬಂದಿದೆ. ಯುವತಿ ನೀಡಿದ ದೂರಿನಂತೆ ನಿವಿನ್ ಪೋಲಿ ಸಹಿತ ಆರು ಮಂದಿ ವಿರುದ್ಧ ಊನುಕ್ಕಲ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಕಿರುಕುಳ ಆರೋಪ ಸುಳ್ಳೆಂದೂ, ದೂರು ನೀಡಿರುವ ಯುವತಿಯನ್ನು ತಾನು ಕಾಣಲೇ ಇಲ್ಲವೆಂದು ನಿವಿಲ್ ಪೋಲಿ ತಿಳಿಸಿದ್ದಾರೆ.