ನಟ ಪೃಥ್ವೀರಾಜ್‌ಗೆ ಆದಾಯ ತೆರಿಗೆ ಇಲಾಖೆಯಿಂದ ನೋಟೀಸು ಜ್ಯಾರಿ
ಕೊಚ್ಚಿ: ಎಂಬುರಾನ್ ಸಿನಿಮಾ ಭಾರೀ ವಿವಾದದಲ್ಲಿ ಸಿಲುಕಿರುವ ವೇಳೆಯಲ್ಲೇ ಈ ಚಿತ್ರದ ನಿರ್ದೇಶಕ ಹಾಗೂ ನಟನಾಗಿರುವ ಪೃಥ್ವೀರಾಜ್‌ಗೆ ಆದಾಯ ತೆರಿಗೆ ಇಲಾಖೆ ನೋಟೀಸು ಜ್ಯಾರಿಗೊಳಿಸಿದೆ.
ಕಡುವ , ಜನಗಣಮನ, ಗೋಲ್ಡ್ ಎಂಬೀ ಚಿತ್ರದಲ್ಲಿ ಎಷ್ಟು ಸಂಭಾವನೆ ಪಡೆಯಲಾಗಿದೆ ಎಂಬ ಬಗ್ಗೆ ಪೂರ್ಣ ಮಾಹಿತಿ ನೀಡುವಂತೆ ನೋಟೀಸಿನಲ್ಲಿ ಆದಾಯ ತೆರಿಗೆ ಇಲಾಖೆ ಪೃಥ್ವೀರಾಜ್‌ಗೆ ನಿರ್ದೇಶ ನೀಡಿದೆ. ಈ ಚಿತ್ರದಲ್ಲಿ ಅಭಿನಯಿಸಿರುವ ಪೃಥ್ವೀರಾಜ್ ಯಾವುದೇ ಸಂಭಾವನೆ ಪಡೆದಿರಲಿಲ್ಲ ಎನ್ನಲಾಗಿದೆ. ಆದರೆ ಅದರ ಸಹ ನಿರ್ಮಾಪಕ ಎಂಬ ನೆಲೆಯಲ್ಲಿ ಅವರು ೪೦ ಕೋಟಿ ರೂ. ಪಡೆದಿದ್ದಾರೆಂದು ಆದಾಯ ತೆರಿಗೆ ಇಲಾಖೆಯ ತಿಳಿಸಿದ್ದು ನಿರ್ಮಾಣ ಕಂಪೆನಿಯ ಹೆಸರಲ್ಲಿ ಈ ಹಣ ಪಡೆಯಲಾಗಿದೆ. ಆದ್ದರಿಂದ ಆ ಬಗ್ಗೆ ಸ್ಪಷ್ಟನೆ ನೀಡಬೇಕೆಂದೂ ನೋಟೀಸಿ ನಲ್ಲಿ ಇಲಾಖೆ ಸೂಚನೆ ನೀಡಿದೆ.
ಎಂಬುರಾನ್ ಚಿತ್ರದ ನಿರ್ಮಾಪಕರಲ್ಲೋರ್ವನಾಗಿರುವ ಗೋಕುಲಂ ಮೂವೀಸ್‌ನ ಹಾಗೂ ಗೋಕುಲಂ ಚಿಟ್ ಫಂಡ್‌ನ ಮಾಲಕರೂ ಆಗಿರುವ ಗೋಕುಲಂ ಗೋಪಾಲನ್‌ರ ಕಚೇರಿಗಳು ಮತ್ತು ಅವರ ನಿವಾಸಗಳಿಗೆ ಜಾರಿ ನಿರ್ದೇಶನಾಲಯ ದಾಳಿ ಮತ್ತು ತಪಾಸಣೆ ನಡೆಸಿರುವ ವೇಳೆಯಲ್ಲೇ ಪೃಥ್ವೀರಾಜ್‌ಗೆ ಆದಾಯ ತೆರಿಗೆ ಇಲಾಖೆ ಈ ನೋಟೀಸು ಜ್ಯಾರಿಗೊಳಿಸಿದೆ.