ಬೆಂಗಳೂರು: ಅನಾರೋಗ್ಯ ತಗಲಿ ಚಿಕಿತ್ಸೆಯಲ್ಲಿದ್ದ ಸ್ಯಾಂಡಲ್‌ವುಡ್ ನಟ ಸಂತೋಷ್ ಬಾಲರಾಜ್ (38) ನಿಧನ ಹೊಂದಿದರು. ಹಳದಿ ಕಾಮಾಲೆ ರೋಗದಿಂದ ಬಳಲುತ್ತಿದ್ದರು. ಸಾಗರ್ ಅಪೋಲೊ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕರಿಯ -2, ಕೆಂಪ, ಗಣಪ, ಬರ್ಕ್ಲಿ, ಸತ್ಯ ಮೊದಲಾದ ಸಿನಿಮಾಗಳಲ್ಲಿ ನಾಯಕನಟರಾಗಿ ಅಭಿನಯಿಸಿದ್ದರು.