ತಿರುವನಂತಪುರ: ಸುಪ್ರೀಂಕೋರ್ಟ್ ನಲ್ಲಿ ನಟ ಸಿದ್ದಿಕ್ ವಿರುದ್ಧವಾದ ಮಂಡಿಸಲು ತನಿಖಾ ತಂಡದ ಇಬ್ಬರು ಎಸ್‌ಪಿಗಳು ದೆಹಲಿಗೆ ತೆರಳುವರು. ನಿರೀಕ್ಷಣಾ ಜಾಮೀನು ಪರಿಗಣಿಸುವು ದಕ್ಕಿಂತ ಮುಂಚಿತವಾಗಿ ಕಾನೂನು ತಂಡಕ್ಕೆ ವಿಷಯಗಳನ್ನು ಮನವರಿಕೆ ಮಾಡಲು ಎಸ್‌ಪಿಗಳು ತೆರಳುತ್ತಿರುವುದಾಗಿ ಹೇಳಲಾಗುತ್ತಿದೆ. ಸರಕಾರಕ್ಕೆ ಬೇಕಾಗಿ ನಿಶೇರಾಜನ್ ಶಂಕರ್ ಸುಪ್ರೀಂಕೋರ್ಟ್ ನಲ್ಲಿ ಹಾಜರಾಗುವರು. ಮಾಜಿ ಸೋಲಿಸಿಟರ್ ಜನರಲ್ ರಂಜಿತ್ ಕುಮಾರ್‌ರ ಕಾನೂನು ಉಪದೇಶ ಕೂಡಾ ಸರಕಾರ ಪಡೆದಿದೆ. ಸೋಮವಾರ ಅಥವಾ ಮಂಗಳವಾರ ನ್ಯಾಯಾಲಯ ಜಾಮೀನು ಮನವಿಯನ್ನು ಪರಿಗಣಿಸಬಹುದಾಗಿದೆ. ತೀರ್ಪು ಪ್ರತಿಕೂಲವಾದರೆ ಕೂಡಲೇ ಶರಣಾಗುವುದಾಗಿ ನ್ಯಾಯವಾದಿಗಳ ಮೂಲಕ ನಟ ಸಿದ್ದಿಕ್ ಪೊಲೀಸರಿಗೆ ತಿಳಿಸಿರುವುದಾಗಿ ಮಾಹಿತಿ ಇದೆ. ಸಿದ್ದಿಕ್‌ನ ಮೊಬೈಲ್‌ಫೋನ್ ಈಗ ಸ್ವಿಚ್ ಆಫ್ ಆಗಿದೆ. ಕೊಚ್ಚಿಯ ಖ್ಯಾತ ನ್ಯಾಯವಾದಿಯೊಂದಿಗೆ ಸಂಪರ್ಕವಿರುವ ಕೆಲವರು ಸಿದ್ದಿಕ್‌ಗೆ ರಹಸ್ಯ ಅಡಗುತಾಣ ಸಿದ್ಧಪಡಿಸಿರಬೇಕೆಂದು ಪೊಲೀಸರು ಅಂದಾಜಿಸಿದ್ದಾರೆ. ನಗರದಲ್ಲಿಯೇ ಆರು ಕಡೆಗಳಲ್ಲಿ ಸಿದ್ದಿಕ್ ಕಳೆದ ಎರಡು ದಿನಗಳಿಂದ ಅದಲಿಬದಲಿಯಾಗಿ ವಾಸಿಸು ತ್ತಿದ್ದ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಲಭಿಸಿದೆ.
ಸುಪ್ರೀಂಕೋರ್ಟ್ ಕೇಸನ್ನು ಪರಿಗಣಿಸುವ ವರೆಗೆ ಸಿದ್ದಿಕ್‌ನ ಬಂಧನ ಬೇಡ ಎಂಬ ಉನ್ನತ ನಿರ್ದೇಶದ ಹಿನ್ನೆಲೆ ಯಲ್ಲಿ ಪೊಲೀಸರು ಕಣ್ಮುಚ್ಚಿ ಕುಳಿತಿರುವು ದಾಗಿಯೂ ಟೀಕಿಸಲಾಗುತ್ತಿದೆ. ಸಿದ್ದಿಕ್‌ನ ಪತ್ತೆಗಾಗಿರುವ ಲುಕೌಟ್ ನೋಟೀಸ್ ಇತರ ರಾಜ್ಯಗಳ ಪತ್ರಿಕೆಗಳಲ್ಲೂ ಪೊಲೀಸರು ಪ್ರಕಟಿಸಿದ್ದಾರೆ. ಸಿದ್ದಿಕ್ ರಾಜ್ಯವನ್ನು ಬಿಟ್ಟು ತೆರಳಿರುವುದಾಗಿ ಶಂಕಿಸಿದ ಹಿನ್ನೆಲೆಯಲ್ಲಿ ಈ ಪ್ರಕಟಣೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.