ನಯಾಬಜಾರ್‌ನ ಲಯನ್ಸ್ ಸೇವಾ ಮಂದಿರದಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣೆ ಶಿಬಿರ ಉದ್ಘಾಟನೆ
ಉಪ್ಪಳ: ಲಯನ್ಸ್ ಕ್ಲಬ್ ಮಂಜೇಶ್ವರ, ಉಪ್ಪಳ, ಶ್ರೀ ಧರ್ಮಚಕ್ರ ಟ್ರಸ್ಟ್, ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜಂಗಾವು, ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಇವರ ಜಂಟಿ ಆಶ್ರಯದಲ್ಲಿ 600ನೇ ಉಚಿತ ಕಣ್ಣಿನ ಪೊರೆ ತಪಾಸಣೆ ಶಿಬಿರ ಹಾಗೂ ರಿಯಲ್ ಲ್ಯಾಬ್ ಹೊಸಂಗಡಿ ಇವರಿಂದ ಉಚಿತ ಮಧುಮೇಹ ತಪಾಸಣೆ ಶಿಬಿರ ನಿನ್ನೆ ನಯಬಜಾರ್ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಲಕ್ಷ÷್ಮಣ್ ಕುಂಬಳೆ ಅಧ್ಯಕ್ಷತೆ ವಹಿಸಿದರು. ಡಿಸ್ಟ್ರಿಕ್ಟ್ ಗವರ್ನರ್ ಲಯನ್ ಸಿಎ ಟಿ.ಕೆ ರಜೀಸ್ ದೀಪ ಬೆಳಗಿಸಿ ಉದ್ಘಾಟಿಸುವರು. ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜುಂಗಾವು ಆಡಳಿತಾಧಿಕಾರಿ ಲಯನ್ ಡಾ.ಯಂ. ಶ್ರೀಧರ ಭಟ್ ಪ್ರಸ್ತಾವಿಕ ಭಾಷಣ ಮಾಡಿದರು. ನೇತ್ರ ತಜ್ಞ ಡಾ.ಆನಂದ್ ಎಸ್. ಹುಂಡಿ, ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿಎಂ. ಶ್ರೀನಿವಾಸ್ ಪೈ, ರೀಜ್ಯನಲ್ ಚಯರ್ ಪರ್ಸನ್ ಭಾರ್ಗವ ಉಪಸ್ಥಿತರಿದ್ದರು. ಶರ್ಮಿ ಳಾ ಕಮಲಾಕ್ಷ ಪ್ರಾರ್ಥನೆ ಹಾಡಿ ದರು. ಕ್ಲಬ್ ಕಾರ್ಯದರ್ಶಿ ಲಯನ್ ಅಶೋಕ್ ಸ್ವಾಗತಿಸಿದರು. ಕೋಶಾಧಿಕಾರಿ ಲಯನ್ ಕಮಲಾಕ್ಷ.ಕೆ ಪಂಜ ವಂದಿಸಿ ದರು. ನೂರಾರು ಮಂದಿ ಶಿಬಿರದ ಪ್ರಯೋಜನೆಯನ್ನು ಪಡೆದರು. ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜುಂ ಗಾವು, ರಿಯಲ್ ಲ್ಯಾಬ್ ಹೊಸಂಗಡಿ ಇದರ ಸಿಬ್ಬಂದಿ ವರ್ಗ ಹಾಗೂ ಲಯನ್ಸ್ ಕ್ಲಬ್‌ನ ಪದಾಧಿ ಕಾರಿಗಳು, ಸದಸ್ಯರು ನೇತೃತ್ವ ನೀಡಿದರು.