ನರ್ಸಿಂಗ್ ಟ್ರೈನಿ ಹಾಸ್ಟೆಲ್‌ನಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣ: ಕ್ರೈಮ್ ಬ್ರಾಂಚ್ ತನಿಖೆ ಆರಂಭ

ಕಾಸರಗೋಡು: ನರ್ಸಿಂಗ್ ಟ್ರೈನಿ ಆಗಿರುವ ಯುವತಿ ಹಾಸ್ಟೆಲ್‌ನೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣದ ಬಗ್ಗೆ ಕಾಸg ಗೋಡು ಕ್ರೈಮ್ ಬ್ರಾಂಚ್   ಡಿವೈಎಸ್‌ಪಿ  ಪಿ. ಮಧುಸೂದನನ್ ನಾಯರ್ ರ ನೇತೃತ್ವದ ಮೇಲ್ನೋಟದಲ್ಲಿ ಕ್ರೈಮ್ ಬ್ರಾಂಚ್ ಇನ್ಸ್‌ಪೆಕ್ಟರ್ ಆರ್. ಶ್ರೀಕುಮಾರ್ ನೇತೃತ್ವದ ತಂಡ ಸಮಗ್ರ ತನಿಖೆ ಆರಂಭಿಸಿದೆ.

ಬಂದ್ಯೋಡಿನ ಖಾಸಗಿ ಆಸ್ಪತ್ರೆ ಯೊಂದರ ನರ್ಸಿಂಗ್ ಟ್ರೈನಿಯಾಗಿದ್ದ ಕೊಲ್ಲಂ, ತೇನ್ಮಲ ಇರುಕುನ್ನು ನಿವಾಸಿ ಕೆ. ಸ್ಮೃತಿ (20) ಆಗಸ್ಟ್ 26ರಂದು ಮಧ್ಯಾಹ್ನ ಆಕೆ ವಾಸಿಸುತ್ತಿದ್ದ ಹಾಸ್ಟೆಲ್‌ನ ಕೊಠಡಿಯಲ್ಲಿ ಚೂಡಿದಾರ್ ಶಾಲ್‌ನಿಂದ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಕೆಯ ಸಹಪಾಠಿಗಳು ಫೋನ್ ಕರೆದರೂ ಕರೆ ಸ್ವೀಕರಿಸಿರಲಿಲ್ಲ. ಅದರಿಂದ ಶಂಕೆಗೊಂಡ ಸಹಪಾಠಿಗಳು ಆ ಹಾಸ್ಟೆಲ್‌ಗೆ ತೆರಳಿ ನೋಡಿದಾಗ ಸ್ಮೃತಿ  ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಮೃತದೇಹದ ಪಾದ ನೆಲಕ್ಕೆ ತಾಗಿ ನಿಂತ ಸ್ಥಿತಿಯಲ್ಲಿತ್ತು. ಸಾವಿನ ಬಗ್ಗೆ ಆ ಯುವತಿಯ ಮನೆಯವರು ಸಂಶಯ ವ್ಯಕ್ತಪಡಿಸಿ ಮುಖ್ಯಮಂತ್ರಿಗೆ ದೂರು ನೀಡಿದ್ದರು.

ಅದರಂತೆ ರಾಜ್ಯ ಗೃಹಖಾತೆ ನೀಡಿದ ನಿರ್ದೇಶ ಪ್ರಕಾರ ತನಿಖೆಯನ್ನು ಕ್ರೈಮ್ ಬ್ರಾಂಚ್ ಕೈಗೆತ್ತಿಕೊಂಡಿದೆ.ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕುತ್ತಿಗೆ ಬಿಗಿದು ಸಾವು ಸಂಭವಿಸಿದೆ ಎಂದು ತಿಳಿಸಲಾಗಿತ್ತು. ಸಾವನ್ನಪ್ಪುವ ಮೂರು ತಿಂಗಳ ಹಿಂದೆಯಷ್ಟೇ ಸ್ಮೃತಿ ಬಂದ್ಯೋಡಿನ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರ್ಪಡೆಗೊಂಡಿದ್ದರು.

You cannot copy contents of this page