ನರ್ಸಿಂಗ್ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ
ಚೆನ್ನೈ: ತಮಿಳ್ನಾಡಿನಲ್ಲಿ ಕೇರಳೀಯ ವಿದ್ಯಾರ್ಥಿನಿಯನ್ನು ಸಾಮೂಹಿಕ ಅತ್ಯಾಚಾರಗೊಳಿಸಿರುವುದಾಗಿ ದೂರಲಾಗಿದೆ. ತೇನಿಗೆ ಸಮೀಪ ನರ್ಸಿಂಗ್ ವಿದ್ಯಾರ್ಥಿನಿಯಾದ ಯುವತಿಯನ್ನು ನಾಲ್ಕು ಮಂದಿ ತಂಡ ಅಪಹರಿಸಿ ಕೊಂಡೊಯ್ದು ನಿರ್ಜನ ಪ್ರದೇಶದಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಹೇಳಲಾಗುತ್ತಿದೆ. ಕೃತ್ಯದ ಬಳಿಕ ಆರೋಪಿಗಳು ಯುವತಿಯನ್ನು ದಿಂಡಿಗಲ್ ರೈಲ್ವೇ ನಿಲ್ದಾಣ ಸಮೀಪ ಉಪೇಕ್ಷಿಸಿ ಪರಾರಿಯಾಗಿದ್ದಾರೆ. ಯುವತಿ ಸಮೀಪದ ಮಹಿಳಾ ಪೊಲೀಸ್ ಠಾಣೆಗೆ ತಲುಪಿ ದೂರು ನೀಡಿದ್ದಾಳೆ. ಬಳಿಕ ಯುವತಿಯನ್ನು ದಿಂಡಿಗಲ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.