ನವಕೇರಳ ಬಸ್‌ಗೆ ದುರಸ್ತಿ

ಕಲ್ಲಿಕೋಟೆ: ಮುಖ್ಯಮಂತ್ರಿ ಹಾಗೂ ಸಚಿವರು ಸಂಚರಿಸುವ ನವಕೇರಳ ಬಸ್ ಸಂಚಾರ ಆರಂಭಿಸಿ ಕೆಲವೇ ದಿನಗಳಾಗುತ್ತಲೇ  ಅದಕ್ಕೆ ದುರಸ್ತಿ  ಕಾಮಗಾರಿ ನಡೆಸಲಾಗಿದೆ. ಬಸ್‌ನ ಗಾಜು ಬದಲಾಯಿಸಿ ಎಸಿ ದುರಸ್ತಿ ನಡೆಸಲಾ ಗಿದೆ. ದೃಶ್ಯಗಳು ಸ್ಪಷ್ಟವಾಗಿ ಕಾಣದಿ ರುವುದರಿಂದ ಗಾಜು ಬದಲಾಯಿಸಿ ರುವುದಾಗಿ ಹೇಳಲಾಗುತ್ತಿದೆ.

ನಿನ್ನೆ ರಾತ್ರಿ  ೧೦ ಗಂಟೆ ವೇಳೆ ಕಲ್ಲಿಕೋಟೆ ನಡಕ್ಕಾವ್‌ನಲ್ಲಿರುವ ವರ್ಕ್ ಶಾಪ್‌ನಲ್ಲಿ ದುರಸ್ತಿ ನಡೆಸಲಾಗಿದೆ. ಬಸ್ ನಿರ್ಮಿಸಿದ ಸಂಸ್ಥೆಯ ನೌಕರರೂ ಕಲ್ಲಿಕೋಟೆಗೆ ತಲುಪಿದ್ದರು. ಭಾರೀ ಪೊಲೀಸರ ಬಂದೋಬಸ್ತ್‌ನೊಂದಿಗೆ ಬಸ್ಸನ್ನು ಗ್ಯಾರೇಜಿಗೆ ತಲುಪಿಸಲಾಗಿತ್ತು. ಬಸ್ ಮೊನ್ನೆ ವಯನಾಡ್ ಮಾನಂತವಾ ಡಿಗೆ ತಲುಪಿದಾಗ ಈ ಬಸ್‌ನ ಚಕ್ರ ಕೆಸರಲ್ಲಿ ಹೂತು ಹೋದ ಘಟನೆ ನಡೆದಿತ್ತು. ಬಳಿಕ ಪೊಲೀಸರು ಹಾಗೂ ಭದ್ರತಾ ಸದಸ್ಯರು ಕಷ್ಟಪಟ್ಟು ಬಸ್ಸನ್ನು ಮೇಲೆತ್ತಿದ್ದರು.

You cannot copy contents of this page