ನವಕೇರಳ ವೇದಿಕೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರ ಸ್ವಾಗತ ಸಮಿತಿ ರೂಪೀಕರಣ ೯ರಂದು
ಮಂಜೇಶ್ವರ: ನವಕೇರಳ ನಿರ್ಮಾಣದಂಗವಾಗಿ ರಾಜ್ಯ ಸರಕಾರ ಇಲ್ಲಿಯ ತನಕ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರೊಂದಿಗೆ ಸಂವಾದ ನಡೆಸಲು ಮುಖ್ಯಮಂತ್ರಿ ಯವರ ನೇತೃತ್ವದಲ್ಲಿ ಸಚಿವರು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪರ್ಯಟನೆ ನಡೆಸುತ್ತಿದ್ದಾರೆ. ಇದರಂಗವಾಗಿ ಜಿಲ್ಲಾ ಮಟ್ಟದ ಸಂದರ್ಶನ, ಜನಸ್ತೋಮ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ಪ ನವಕೇರಳ ವೇದಿಕೆ ನ. ೧೮ರಂದು ಸಂಜೆ ೩.೩೦ಕ್ಕೆ ಪೈವಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಇದರ ಯಶಸ್ವಿಗೆ ಸ್ವಾಗತ ಸಮಿತಿ ರೂಪೀಕರಣ ಈ ತಿಂಗಳ ೯ರಂದು ಸಂಜೆ ೪ಕ್ಕೆ ಪೈವಳಿಕೆ ಕುಲಾಲ ಸಮಾಜ ಮಂದಿರದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೆ. ಇಂಬಶೇಖರನ್ ತಿಳಿಸಿದ್ದಾರೆ.