ನವಜೀವನ ಹೈಯರ್ ಸೆಕೆಂಡರಿ ಶಾಲೆ ಶಾಲಾ ಕಲೋತ್ಸವಕ್ಕೆ ಚಾಲನೆ

ಬದಿಯಡ್ಕ: ನವಜೀವನ ಹೈಯರ್ ಸೆಕೆಂಡರಿ ಶಾಲಾ ಕಲೋತ್ಸವ ವನ್ನು ಬದಿಯಡ್ಕ ಪಂಚಾಯತ್ ಸದಸ್ಯ ಶಾಮಪ್ರಸಾದ್ ಮಾನ್ಯ ಉದ್ಘಾಟಿಸಿದರು. ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಕಲಾಪ್ರತಿಭೆಯನ್ನು ಪ್ರಸ್ತುತಪಡಿಸುವ ವೇದಿಕೆಯಾಗಿದೆ ಶಾಲಾ ಕಲೋತ್ಸವ. ಅದನ್ನು ಸದುಪಯೋಗಪಡಿಸಿಕೊಂಡು ಶಾಲೆಯ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಪ್ರಸರಿಸಬೇಕು ಎಂದು ಕರೆ ನೀಡಿದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸಲೀಂ ಎಡನೀರು ಅಧ್ಯಕ್ಷತೆ ವಹಿಸಿದರು. ಸ್ಟಾಫ್ ಕಾರ್ಯದರ್ಶಿಗಳಾದ ಪ್ರಭಾಕರ ನಾಯರ್, ಪ್ರಭಾವತಿ ಕೆದಿಲಾಯ, ಹಿರಿಯ ಅಧ್ಯಾಪಿಕೆ ಶಾಹಿದ ಬಿ.ವಿ., ಕೇಶವ, ಸರ್ವಮಂಗಲ, ಕಲೋತ್ಸವ ಸಂಚಾಲಕಿ ಶ್ರೀಜಾ ಶುಭ ಹಾರೈಸಿದರು. ಮುಖ್ಯೋಪಾಧ್ಯಾಯಿನಿ ಮಿನಿ ಪಿ. ಸ್ವಾಗತಿಸಿ, ಪ್ರಿನ್ಸಿಪಾಲ್ ಮಾಧವನ್ ಭಟ್ಟತಿರಿ ವಂದಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಜೊತೆ ಸಂಚಾಲಕ ನಿರಂಜನ ರೈ ಪೆರಡಾಲ ನಿರೂಪಿಸಿದರು.

You cannot copy contents of this page