ನಾಟಿ ವೈದ್ಯೆ ನಿಧನ
ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಬಳಿಯ ನಿವಾಸಿ ದಿ| ಕೃಷ್ಣ ಮಾರಾರ್ರ ಪತ್ನಿ ಮಾಧವಿ ಮಾರಾರ್ (79) ನಿಧನ ಹೊಂದಿದರು. ನಾಟಿ ವೈದ್ಯೆಯಾಗಿ ಚಿರ ಪರಿಚಿತರಾಗಿದ್ದ ಇವರು ಅಲ್ಪ ಕಾಲದಿಂದ ಅಸೌಖ್ಯದಿಂದಿದ್ದರು. ಮೃತರು ಮಕ್ಕಳಾದ ಸುರೇಶ್ ಮಾರಾರ್, ನಾರಾಯಣ ಮಾರಾರ್ (ಇಬ್ಬರೂ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದಲ್ಲಿ ಚೆಂಡೆ ವಾದಕರು), ಉಷಾ, ಧನಲಕ್ಷ್ಮಿ, ಅಳಿಯ- ಸೊಸೆಯಂದಿರಾದ ರಾಜನ್, ಗೋಪಿನಾಥ್, ವಸುಮತಿ, ಪ್ರೀತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.