ನಾಡನ್ನು ಶೋಕಸಾಗರದಲ್ಲಿ ಮುಳುಗಿಸಿದ ಎರಡು ದಿನ ಎರಡು ದುರಂತಗಳು: ಕಾಸರಗೋಡು ಜಿಲ್ಲೆಯಲ್ಲಿ ಐದು ಮಕ್ಕಳ ಜೀವಹಾನಿ

ಕಾಸರಗೋಡು: ಎರಡು ದಿನಗಳಲ್ಲಾಗಿ ಕಾಸರಗೋಡು ಜಿಲ್ಲೆಯಲ್ಲಿ ಸಂಭವಿಸಿದ ಎರಡು ವಿಭಿನ್ನ ದುರಂತಗಳಲ್ಲಿ ಐದು ಬಾಲಕರ ಜೀವ ಹಾನಿಗೊಂಡಿದೆ. ಶನಿವಾರ ಮಧ್ಯಾಹ್ನ ಎರಡು ಗಂಟೆಗೆ ಊರನ್ನೇ ನಡುಗಿಸಿದ ಮೊದಲ ದುರಂತ ಎರಿಂಞಿಪುಳ ಹೊಳೆಯಲ್ಲಿ ಉಂಟಾಗಿದೆ. ಎರಿಂಞಿಪುಳ ಸೇತುವೆ ಸಮೀಪದ ಹಳೆಯ ಕಡವುನಲ್ಲಿ ಸ್ನಾನಕ್ಕೆಂದು ಇಳಿದ ಮೂರು ಮಕ್ಕಳ ಜೀವ ನಷ್ಟಗೊಂಡಿದೆ. ಎರಿಂಞಿಪುಳ ಕಡವಿನ ಅಶ್ರಫ್‌ರ ಪುತ್ರ ಮುಹಮ್ಮದ್ ಯಾಸಿನ್ (12), ಸಹೋದರ ಅಬ್ದುಲ್ ಮಜೀದ್‌ರ ಪುತ್ರ ಅಬ್ದುಲ್ ಸಮದ್ (13), ಇವರ ಸಹೋದರಿ ರಮ್ಲರ ಪುತ್ರ ರಿಯಾಸ್ (17) ಎಂಬಿವರು ಮೃತಪಟ್ಟವರು. ನಾಡನ್ನೇ ದಿಗ್ಭ್ರಾಂತಗೊಳಿಸಿದ ದುರಂತದ ಕರಿಛಾಯೆ ಮಾಸುವ ಮೊದಲೇ ಕಾಞಂಗಾಡ್ ಐಂಙೋತ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಸಹೋದರರಾದ ಇಬ್ಬರು ಮಕ್ಕಳಿಗೆ ಜೀವ ಹಾನಿ ಸಂಭವಿಸಿದೆ. ಪಡನ್ನಕ್ಕಾಡ್ ತೀರ್ಥಂಕರದ ಲತೀಫ್ ಕಲ್ಲಾಯಿಯವರ ಮಕ್ಕಳಾದ ಲೆಹಕ್ ಸೈನಬ(12), ಸೇಯಿಲ್ ರುಮಾನ್ (9 ಎಂಬಿವರು ಮೃತಪಟ್ಟವರು. ಲತೀಫ್‌ರ ಪತ್ನಿ ಫಾತಿಮತ್ ಸುಹರಾಬಿ (40), ಇತರ ಮಕ್ಕಳಾದ ಫಾಯಿಸ್ (18), ಶೆರಿನ್ (14) ಎಂಬಿವರು ಗಾಯಗೊಂಡು ಕಣ್ಣೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಇವರ ಸಣ್ಣ ಮಗು ಮಿಸಬ್ (3) ಗಾಯಗಳಿಲ್ಲದೆ ಅದ್ಭುತಕರವಾಗಿ ಪಾರಾಗಿದೆ.  ಕೆಎಸ್‌ಆರ್‌ಟಿಸಿ ಬಸ್‌ಗೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ಹಾನಿಯಾಗಿದೆ. ಅಗ್ನಿಶಾಮಕದಳ, ಪೊಲೀಸರು ತಲುಪಿ ಕಾರನ್ನು ಮುರಿದು ಅದರೊಳಗಿದ್ದವರನ್ನು ಹೊರತೆಗೆದಿದ್ದಾರೆ.

ಎರಿಂಞಿಪುಳ ಹೊಳೆಯಲ್ಲಿ ಮುಳುಗಿ ಮೂವರು ಬಾಲಕರು ಮೃತ್ಯು

ಕಾನತ್ತೂರು: ಕಾನತ್ತೂರು ಬಳಿಯ ಎರಿಂಞಿಪುಳ ಹೊಳೆಯಲ್ಲಿ ಮುಳುಗಿ ಮೂವರು  ಬಾಲಕರು ಮೃತಪಟ್ಟ ದಾರುಣ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.

ಮಂಜೇಶ್ವರ ಉದ್ಯಾವರ ಫಸ್ಟ್ ಸಿಗ್ನಲ್‌ನ ಸಿದ್ದಿಕ್ ಹಾಗೂ ರಮ್ಲ ದಂಪತಿಯ ಪುತ್ರ ಮುಹಮ್ಮದ್ ರಿಯಾಸ್ (17), ಎರಿಂಞಿಪುಳ ಕಡವಿನ ಅಬ್ದುಲ್ ಮಜೀದ್-ಸಫೀನ ದಂಪತಿಯ ಪುತ್ರ ಅಬ್ದುಲ್ ಸಮದ್ (13), ಅಶ್ರಫ್ ಹಾಗೂ ಸಬೀನ ದಂಪತಿಯ ಪುತ್ರ ಮುಹಮ್ಮದ್ ಯಾಸಿನ್ (12) ಎಂಬಿವರು ಹೊಳೆಯಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಮೊನ್ನೆ ಮಧ್ಯಾಹ್ನ ೨ ಗಂಟೆಗೆ ಇಡೀ ನಾಡನ್ನೇ ಬೆಚ್ಚಿಬೀಳಿಸಿದ ಈ ಘಟನೆ ಸಂಭವಿಸಿದೆ.  ಈ ಮೂವರು ಮಕ್ಕಳು ಸಂಬಂಧಿಕರೊಂದಿಗೆ ಹೊಳೆಗೆ ತೆರಳಿದ್ದರು. ನೀರಿಗಿಳಿದ  ಮಕ್ಕಳ ಪೈಕಿ ಮುಹಮ್ಮದ್ ರಿಯಾಸ್ ನೀರಿನ ಸೆಳೆತಕ್ಕೀಡಾಗಿದ್ದು, ಈ ವೇಳೆ ಆತನನ್ನು ರಕ್ಷಿಸಲು ಮತ್ತಿಬ್ಬರು ಮಕ್ಕಳು ಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗದೆ ಮೂವರು ನೀರಿನಲ್ಲಿ ಮುಳುಗಿದ್ದಾರೆ. ಜತೆಗಿದ್ದವರು  ಕೂಡಲೇ ನೀರಿಗಿಳಿದು ರಕ್ಷಿಸಲು ಯತ್ನಿಸಿದರೂ ಪ್ರಯೋಜನವಾ ಗಲಿಲ್ಲ. ಬೊಬ್ಬೆ ಕೇಳಿ ತಲುಪಿದ ನಾಗರಿಕರು, ಪೊಲೀಸರು ಹಾಗೂ ಕುತ್ತಿಕ್ಕೋಲ್ ಅಗ್ನಿಶಾಮಕದಳ ಹೊಳೆಯಲ್ಲಿ ಶೋಧ ನಡೆಸಿ ಮೂವರನ್ನು ಪತ್ತೆಹಚ್ಚಿದರೂ ಅವರ ಜೀವ ರಕ್ಷಿಸಲಾಗಲಿಲ್ಲ.

ಮಂಜೇಶ್ವರ ಎಸ್‌ಎಪಿಎಚ್‌ಎಸ್‌ಎಸ್‌ನ ಪ್ಲಸ್‌ಟು ವಿದ್ಯಾರ್ಥಿಯಾದ ಮುಹಮ್ಮದ್ ರಿಯಾಸ್, ಸಹೋದರಿ ರಿಸ್ವಾನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.  ಕಾನತ್ತೂರು ಸರಕಾರಿ ಯುಪಿ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಯಾದ ಮುಹಮ್ಮದ್ ಯಾಸಿನ್ ತಂದೆ, ತಾಯಿ, ಸಹೋದರ-ಸಹೋದರಿಯರಾದ ಫಾತಿಮ, ಸಫಾ ಮುಹಮ್ಮದ್, ಅಮೀನ್ ಮೊದಲಾದವರನ್ನು ಅಗಲಿದ್ದಾರೆ.

ಉಪ್ಪಳ ಜಿಎಚ್‌ಎಸ್‌ಎಸ್‌ನ 7ನೇ ತರಗತಿ ವಿದ್ಯಾರ್ಥಿಯಾದ ಅಬ್ದುಲ್ ಸಮದ್ ತಂದೆ, ತಾಯಿ, ಸಹೋದರ ಮುಹಮ್ಮದ್  ಶಾಮಿಲ್ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.

ಕೆಎಸ್‌ಆರ್‌ಟಿಸಿ ಬಸ್-ಕಾರು ಢಿಕ್ಕಿ: ಇಬ್ಬರು ಮಕ್ಕಳ ದಾರುಣ ಸಾವು

ಕಾಸರಗೋಡು: ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರು ಢಿಕ್ಕಿ ಹೊಡೆದು  ಪಡನ್ನಕ್ಕಾಡ್ ರಾಷ್ಟ್ರೀಯ ಹೆದ್ದಾರಿ ಐಂಙೋತ್ತ್ ರಸ್ತೆಯಲ್ಲಿ  ನಡೆದ ದುರ್ಘಟನೆಯಲ್ಲಿ  ಕಾರಿನಲ್ಲಿ  ಪ್ರಯಾಣಿಸುತ್ತಿದ್ದ ಜಪಾನಿನಲ್ಲಿ ಉದ್ಯೋಗದಲ್ಲಿದ್ದ ಪಡನ್ನಕ್ಕಾಡ್ ತೀರ್ಥಂಕರದ ಲತೀಫ್ ಕಲ್ಲಾಯಿ ಎಂಬವರ ಮಕ್ಕಳಾದ ನೀಲೇಶ್ವರ ರಾಜಾಸ್ ಹೈಯರ್ ಸೆಕೆಂಡರಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಲೈಹಾಕ್ ಸೈನಬ (12) ಮತ್ತು ನೀಲೇಶ್ವರ ಸರಕಾರಿ ಎಲ್‌ಪಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಸೆಯಿಲ್ ರುಮಾನ್ (9) ಎಂಬವರು ಸಾವನ್ನಪ್ಪಿದ್ದಾರೆ.

ಮಕ್ಕಳ ತಾಯಿ ಫಾತಿಮತ್ ಸುಹರಾಬಿ (40) ಮತ್ತು ಅವರ ಇತರ ಇಬ್ಬರು ಮಕ್ಕಳಾದ ಫಾಯೀಸ್ (18) ಮತ್ತು ಶರೀನ್ (14) ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು, ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.   ನೀಲೇಶ್ವರ ಮನ್ನಂಪುರದಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.  ಫಾಯಿಸ್ ಕಾರು ಚಲಾಯಿಸುತ್ತಿದ್ದರ.  

Leave a Reply

Your email address will not be published. Required fields are marked *

You cannot copy content of this page