ನಾಡನ್ನೇ ಬೆಚ್ಚಿ ಬೀಳಿಸಿದ ಭೀಕರ ದುರ್ಘಟನೆ : ಪಾಲಕ್ಕಾಡ್ ಬಳಿ ಲಾರಿ ಅಪಘಾತದಲ್ಲಿ ನಾಲ್ಕು ಮಂದಿ ವಿದ್ಯಾರ್ಥಿನಿಯರು ಮೃತ್ಯು: ನಾಡಿನಲ್ಲಿ ಶೋಕಸಾಗರ
ಪಾಲಕ್ಕಾಡ್: ಸಿಮೆಂಟ್ ಹೇರಿ ಬಂದ ಲಾರಿ ನಿಯಂತ್ರಣ ತಪ್ಪಿ ಸಂಚರಿಸಿ ಮಗುಚಿ ಬಿದ್ದು ನಾಲ್ಕು ಮಂದಿ ಶಾಲಾ ವಿದ್ಯಾರ್ಥಿನಿಯರು ಮೃತಪಟ್ಟ ದಾರುಣ ಘಟನೆ ಇಡೀ ನಾಡನ್ನೇ ಬೆಚ್ಚಿಬೀಳಿಸಿದೆ.
ಕಲ್ಲಿಕೋಟೆ ಪಾಲಕ್ಕಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕರಿಂಬ ಪನಯಾಂಪಾಡ ಎಂಬಲ್ಲಿ ನಿನ್ನೆ ಸಂಜೆ 3.50ರ ವೇಳೆ ಘಟನೆ ನq ದಿದೆ. ಕರಿಂಬ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿಯರಾದ ರಿದ ಫಾತಿಮ (13), ಇರ್ಫಾನ ಶೆರಿನ್ (13), ನಿತ ಫಾತಿಮ (13), ಆಯಿಶ (13) ಎಂಬಿವರು ಮೃತ ಪಟ್ಟ ದುರ್ದೈವಿಗ ಳಾಗಿದ್ದಾರೆ. ಅಪಘಾತದಲ್ಲಿ ಗಾಯ ಗೊಂಡ ಕಾಸರಗೋಡು ನಿವಾಸಿ ಯಾದ ಲಾರಿ ಚಾಲಕ ವರ್ಗೀಸ್ (51), ಕ್ಲೀನರ್ ಮಹೇಂದ್ರಪ್ರಸಾದ್ (28) ಎಂಬವರನ್ನು ಮಣ್ಣಾರ್‌ಕಾಡ್‌ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಪಾಲಕ್ಕಾಡ್‌ನಿಂದ ಮಣ್ಣಾರ್ ಕಾಡ್ ಭಾಗಕ್ಕೆ ಸಿಮೆಂಟ್ ಹೇರಿ ಸಾಗುತ್ತಿದ್ದ ಲಾರಿಗೆ ಎದುರಿನಿಂದ ಬರುತ್ತಿದ್ದ ಬೇರೊಂದು ಲಾರಿ ಬಡಿದಿದೆ. ಇದರಿಂದ ನಿಯಂತ್ರಣ ತಪ್ಪಿದ ಸಿಮೆಂಟ್ ಲಾರಿ ರಸ್ತೆಯಿಂದ ಹೊರಗೆ ಸಂಚರಿಸಿ ರಸ್ತೆ ಬದಿ ನಡೆದು ಹೋಗುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಹರಿದು ಅಪಘಾತವುಂಟಾ ಗಿದೆ. ಈ ಭೀಕರ ಅಪಘಾತದಲ್ಲಿ ನಾಲ್ವರು ವಿದ್ಯಾ ರ್ಥಿನಿಯರು ಮೃತಪಟ್ಟಿರುವುದು ಇಡೀ ನಾಡನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಮೃತಪಟ್ಟ ನಾಲ್ವರು ವಿದ್ಯಾರ್ಥಿ ನಿಯರು ಸ್ನೇಹಿತೆಯರಾಗಿ ದ್ದರು. ಈ ನಾಲ್ಕು ಮಂದಿಯ ಮೃತದೇಹ ಗಳನ್ನು ಇಂದು ಒಟ್ಟಿಗೆ ಅಂತ್ಯ ಸಂಸ್ಕಾರ ನಡೆಸಲಾಗು ವುದೆಂದು ತಿಳಿದುಬಂದಿದೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ನಿನ್ನೆ ರಾತ್ರಿ ಪೂರ್ಣಗೊಂ ಡಿತ್ತು. ಇಂದು ಬೆಳಿಗ್ಗೆ ಸಂಬಂ ಧಿಕರಿಗೆ ಬಿಟ್ಟುಕೊಡ ಲಾಯಿತು. ಬಳಿಕ ಮನೆಗಳಿಗೆ ತಲುಪಿಸಿ ಅಂತಿಮ ದರ್ಶನಕ್ಕಿರಿಸಿದ್ದು, ನಾಡಿನ ವಿವಿಧ ಭಾಗಗಳಿಂದ ತಲುಪಿದ ಹಲವಾರು ಮಂದಿ ಅಂತಿಮ ನಮನ ಸಲ್ಲಿಸಿದರು. ಬಳಿಕ ತುಪ್ಪನಾಡ್ ಜಮಾ ಮಸೀದಿ ಪರಿಸರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು.