ನಾಡಿನಾದ್ಯಂತ ಕ್ಷೇತ್ರಗಳಲ್ಲಿ ಇಂದು ವಿದ್ಯಾರಂಭ
ಕಾಸರಗೋಡು: ನವರಾತ್ರಿ ಮಹೋತ್ಸವದ ಸಮಾರೋಪ ದಿನವಾದ ಇಂದು ವಿಜಯದಶಮಿಯನ್ನು ಭಕ್ತಿ, ಸಡಗರದೊಂದಿಗೆ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಪುಟ್ಟ ಮಕ್ಕಳಿಗೆ ವಿದ್ಯಾರಂಭದ ಭಾಗವಾದ ಅಕ್ಷರಾಭ್ಯಾಸ ವಿವಿಧ ಕ್ಷೇತ್ರಗಳಲ್ಲಿ ಇಂದು ನಡೆಯುತ್ತಿದೆ. ಈ ಮೂಲಕ ಮಕ್ಕಳಿಗೆ ಜ್ಞಾನದ ಮೊದಲ ಅಕ್ಷರವನ್ನು ಕಲಿಸಿಕೊಡಲಾಯಿತು. ಮಧೂರು ಶ್ರೀ ಮದನಂತೇ ಶ್ವರ ಸಿದ್ಧಿ ವಿನಾಯಕ ದೇವಸ್ಥಾನ, ಅಣಂಗೂರು ಶ್ರೀ ಶಾರದಾಂಬಾ ಭಜನಾ ಮಂದಿರ, ಕೊಕಕೋಡು ಶ್ರೀ ಆರ್ಯಕಾತ್ಯಾಯಿನಿ ಮಹಾದೇವಿ ಕ್ಷೇತ್ರ, ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ, ಕೊರಕ್ಕೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ತೆಕ್ಕಿಲ್ ಮಹಾಲಕ್ಷ್ಮಿ ಪುರ ಶ್ರೀ ಮಹಿಷಮರ್ದಿನಿ ಕ್ಷೇತ್ರ, ಕನಕವಳಪ್ಪು ಶ್ರೀ ಧರ್ಮಶಾಸ್ತಾ ಕ್ಷೇತ್ರ, ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕೊಲ್ಯ ಮಠ ಶ್ರೀ ದೇವಿ ಮೂಕಾಂಬಿಕಾ ದೇವಸ್ಥಾನ ಸಹಿತ ನಾಡಿನ ವಿವಿಧೆಡೆಗಳಲ್ಲಿರುವ ಕ್ಷೇತ್ರಗಳಲ್ಲಿ ಮಕ್ಕಳಿಗೆ ವಿದ್ಯಾರಂಭ ನಡೆಸಲಾಯಿತು. ಮಹಾನವಮಿ ಪ್ರಯುಕ್ತ ನಿನ್ನೆ ನಾಡಿನಾದ್ಯಂತ ಆಯುಧ ಪೂಜೆ ನಡೆಸಲಾಯಿತು.