ನಾಡಿನ ವಿವಿಧೆಡೆ ಅನಧಿಕೃತ ಮದ್ಯ ಮಾರಾಟ ತೀವ್ರ
ಕಾಸರಗೋಡು: ರಾಜ್ಯದ ಮೂಲೆ ಮೂಲೆಗಳಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಸರಕಾರ ಪ್ರಯತ್ನ ಆರಂಭಿಸಿರುವಾಗಲೇ ಕರ್ನಾಟಕ ಮದ್ಯ ಮಾರಾಟ ನಾಡಿನ ವಿವಿಧೆಡೆ ಬಿರುಸು ಗೊಂಡಿದೆ. ಇತರ ಕಸುಬುಗಳಂತೆಯೇ ಮದ್ಯ ಮಾರಾಟದಲ್ಲೂ ಅನ್ಯ ರಾಜ್ಯ ಕಾರ್ಮಿಕರು ಸಕ್ರಿಯರಾಗಿದ್ದಾರೆ. ಕೂಲಿ ಕೆಲಸಕ್ಕಾಗಿ ರಾಜ್ಯಕ್ಕೆ ತಲುಪಿದ ಇವರಲ್ಲಿ ಸಮರ್ಥರಾದ ಕೆಲವು ಮಂದಿ ಮದ್ಯ ಮಾರಾಟದಲ್ಲೂ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೆಲವು ಗೂಡಂಗಡಿಗಳನ್ನು ಕೇಂದ್ರೀಕರಿಸಿ ಮದ್ಯ ಮಾರಾಟ ತೀವ್ರಗೊಂಡಿದೆ. ಕುಂಬಳೆಯಲ್ಲಿ ಪೊಲೀಸ್ ಠಾಣೆ ಸಮೀಪದಲ್ಲೇ ಇರುವ ಶಾಲಾ ರಸ್ತೆ ಮದ್ಯ ಮಾರಾಟ ಕೇಂದ್ರದಂತೆ ಕಾರ್ಯಾಚರಿಸುತ್ತಿ ದೆಯೆಂಬ ಆರೋಪವೂ ಕೇಳಿಬರುತ್ತಿದೆ. ಇಲ್ಲಿನ ರಸ್ತೆ ಬದಿ ಕರ್ನಾಟಕ ಮದ್ಯದ ಖಾಲಿ ಪ್ಯಾಕೆಟ್‌ಗಳ ರಾಶಿಯೇ ಕಂಡುಬರುತ್ತಿದೆ, ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲೂ ಮದ್ಯ ಮಾರಾಟ ವ್ಯಾಪಕವಾಗಿ ನಡೆಯುತ್ತಿದೆ.
ಮದ್ಯ ಮಾರಾಟಕ್ಕೆ ಪ್ರೋತ್ಸಾಹಿಸಲು ಸರಕಾರ ಕೆಲವು ವ್ಯವಸ್ಥೆಗಳನ್ನು ಜ್ಯಾರಿಗೊಳಿಸು ತ್ತಿರುವುದು ಕೂಡಾ ಅನಧಿಕೃತ ಮದ್ಯ ಮಾರಾಟ ತೀವ್ರಗೊಳ್ಳಲು ಕಾರಣ ವಾಗುತ್ತಿದೆಯೆಂದು ಸಾರ್ವಜನಿಕರು ಅಭಿಪ್ರಾಯಪಡುತ್ತಿದ್ದಾರೆ.