ನಾಪತ್ತೆಯಾಗಿದ್ದ ಮಹಿಳೆ ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ನಾಪತ್ತೆಯಾ ಗಿದ್ದ ಮಹಿಳೆ ಬಾವಿಯಲ್ಲಿ ಸಾವನ್ನ ಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಸೌತ್ ತೃಕ್ಕರಿಪುರ ಇಳಂಬಚ್ಚಿ ಕುಂಞಾಲಿನ್ ಕೀಳಿಲ್ ಸಮೀಪದ ನಿವಾಸಿ ಕೆ.ವಿ. ಪದ್ಮಾವತಿ (67) ಸಾವನ್ನಪ್ಪಿದ ಮಹಿಳೆ. ಇವರು ಮೊನ್ನೆ ನಾಪತ್ತೆಯಾಗಿದ್ದರು. ಆ ಬಗ್ಗೆ ಅವರ ಸಂಬಂಧಿಕರು ಚಂದೇರ ಪೊಲೀಸರಿಗೆ ದೂರು ನೀಡಿದ್ದರು. ನಾಪತ್ತೆ ಯಾದ ಪದ್ಮಾವತಿಗಾಗಿ ಮನೆಯವರು ಮತ್ತು ಊರವರು ಶೋಧ ಆರಂಭಿಸಿದಾಗ ಮನೆ ಸಮೀಪದ ಕಟ್ಟೆಯಿಲ್ಲದ ಬಾವಿಯಲ್ಲಿ ಪದ್ಮಾವತಿಯವರನ್ನು ಸಾವನ್ನಪ್ಪಿದ ಸ್ಥಿತಿಯಲ್ಲಿ ಬಳಿಕ ಪತ್ತೆಹಚ್ಚಿದ್ದಾರೆ.  ಅಗ್ನಿಶಾಮಕದಳ ಸ್ಥಳಕ್ಕಾಗಮಿಸಿ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದ ನಂತರ ಕಣ್ಣೂರು ಸರಕಾರಿ ವೈದ್ಯಕೀಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಯಿತು. ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ಆರಂಭಿಸಿದ್ದಾರೆ.

 ಮೃತರು ಪುತ್ರಿ ಕೆ.ವಿ. ಶುಭ,  ಸಹೋದರ-ಸಹೋದರಿಯರಾದ ಕೆ.ವಿ. ಮೋಹನನ್, ವಿಜಯ್, ಓಮನ ಮತ್ತು ವತ್ಸಲ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

RELATED NEWS

You cannot copy contents of this page