ನಾಪತ್ತೆಯಾದ ಕೃಷಿಕನ ಮೃತದೇಹ ಕೆರೆಯಲ್ಲಿ ಪತ್ತೆ
ಬದಿಯಡ್ಕ: ನಾಪತ್ತೆಯಾಗಿದ್ದ ಕೃಷಿಕರೊಬ್ಬರು ತೋಟದ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಅಗಲ್ಪಾಡಿ ಬಳಿಯ ಪದ್ಮಾರು ನಿವಾಸಿ ಬಾಲಕೃಷ್ಣ ಭಟ್ (73) ಎಂಬವರು ಮೃತಪಟ್ಟ ವ್ಯಕ್ತಿ. ಮೊನ್ನೆ ರಾತ್ರಿ 7 ಗಂಟೆಯಿಂದ ಇವರು ನಾಪತ್ತೆಯಾಗಿದ್ದಾರೆನ್ನಲಾಗಿದೆ. ಈ ಬಗ್ಗೆ ಪತ್ನಿ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದರು. ಮನೆಯವರು ಹಾಗೂ ಸ್ಥಳೀಯರು ಸೇರಿ ಹುಡುಕಾಡುತ್ತಿದ್ದಾಗ ತೋಟದ ಕೆರೆಯಲ್ಲಿ ನಿನ್ನೆ ಮಧ್ಯಾಹ್ನ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ಮೃತದೇಹವನ್ನು ಮೇಲಕ್ಕೆತ್ತಿದ್ದು, ಪೊಲೀಸರು ತಲುಪಿ ಮಹಜರು ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.
ಮೃತರು ಪತ್ನಿ ಶ್ಯಾಮಲ, ಮಕ್ಕಳಾದ ವಿವೇಕ್, ವಿಜಯ, ಸೊಸೆ ವೈಶಾಲಿ, ಅಳಿಯ ಕಿಶೋರ್, ಸಹೋದರರಾದ ಅನಂತರಾಮ ಭಟ್, ರಾಮಚಂದ್ರ ಭಟ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ವೆಂಕಟ್ರಮಣ ಭಟ್ ಈ ಹಿಂದೆ ನಿಧನರಾಗಿದ್ದಾರೆ.