ನಾಪತ್ತೆಯಾದ ಮಹಿಳೆಯ ಪತ್ತೆಗೆ ತನಿಖೆ ತೀವ್ರ
ಕಾಸರಗೋಡು: ಕಸಬ ಬೆದ್ರೆ ಯಲ್ಲಿ ವಾಸವಾಗಿದ್ದ ಆಯಿಷತ್ ಶಾನಿಬ (೨೬)ರ ಪತ್ತೆಗಾಗಿ ಕಾಸರಗೋಡು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಕಳೆದ ಜುಲೈ ೭ರಂದು ಬೆಳಿಗ್ಗೆ ೮.೩೦ಕ್ಕೆ ಶೋರೂಂ ನಲ್ಲಿ ತರಬೇತಿಗೆ ತೆರಳುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದರು. ಆ ಬಳಿಕ ನಾಪತ್ತೆಯಾಗಿದ್ದು, ಹುಡುಕಾಡಿದರೂ ಮಾಹಿತಿ ಲಭಿಸದ ಕಾರಣ ದೂರ ನೀಡಿದ್ದರು. ಇವರ ಬಗ್ಗೆ ವಿವರ ಲಭಿಸಿದರೆ ಕಾಸರಗೋಡು ಠಾಣೆಯ ಇನ್‌ಸ್ಪೆಕ್ಟರ್‌ರ ೯೪೯೭೯೮೭೨೧೭ರಲ್ಲಿ ತಿಳಿಸಲು ಪೊಲೀಸರು ಸೂಚಿಸಿದ್ದಾರೆ.