ನಾಪತ್ತೆಯಾದ ಯುವಕನ ಮೃತದೇಹ ಹೊಳೆಯಲ್ಲಿ ಪತ್ತೆ
ಕಾಸರಗೋಡು: ನಾಪತ್ತೆಯಾದ ಯುವಕನ ಮೃತದೇಹ ಹೊಳೆಯಲ್ಲಿ ಪತ್ತೆಯಾಗಿದೆ. ಕಾಸರಗೋಡು ಕಸಬಾ ಕಡಪ್ಪುರ ಶ್ರೀ ಅಯ್ಯಪ್ಪ ಭಜನಾ ಮಂದಿರ ಬಳಿಯ ರಮೇಶನ್- ಮಿನಿ ದಂಪತಿ ಪುತ್ರ ಆದಿತ್ಯನ್ (22) ಸಾವನ್ನಪ್ಪಿದ ಯುವಕ. ಮಂಗಳವಾರ ಮಧ್ಯಾಹ್ನ ಬಳಿಕ ಆದಿತ್ಯನ್ ನಾಪತ್ತೆಯಾಗಿ ದ್ದನು. ಆತನಿಗಾಗಿ ಮನೆಯವರು ಮತ್ತು ಸ್ನೇಹಿತರು ವ್ಯಾಪಕ ಶೋಧ ಆರಂಭಿಸಿದ್ದರು. ಆತನನ್ನು ಮೊಬೈ ಲ್ ಫೋನ್‌ನಲ್ಲಿ ಸಂಪರ್ಕಿಸಲೆತ್ನಿ ಸಿದಾಗ ಅದರ ಲೊಕೇಷನ್ ಕಾಸರಗೋಡು ಹಾರ್ಬರ್ ಬಳಿಯ ಹೊಳೆ ಬದಿ ತೋರಿಸಿದೆ. ಅದರಂತೆ ಅಲ್ಲಿಗೆ ಹೋಗಿ ನೋಡಿದಾಗ ಅಲ್ಲಿ ಆದಿತ್ಯನ ಬೈಕ್, ಮೊಬೈಲ್ ಪೋನ್ ಮತ್ತು ಪರ್ಸ್ ಅಲ್ಲಿ ಪತ್ತೆಯಾಯಿತಾ ದರೂ ಆತನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಅದರಿಂದ ಶಂಕೆಗೊಂಡು ಹೊಳೆಯಲ್ಲಿ ಶೋಧ ಆರಂಭಿಸಿದಾಗ ನಿನ್ನೆ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ. ಮೃತದೇಹದ ಮುಖದಲ್ಲಿ ಗಾಯದ ಗುರುತು ಪತ್ತೆಯಾಗಿದೆ.
ಅಗ್ನಿಶಾಮಕದಳ ಆಗಮಿಸಿ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಗೊಳಪಡಿಸಲಾಯಿತು. ಘಟನೆ ಬಗ್ಗೆ ಕಾಸರಗೋಡು ಪೊಲೀಸರು ತನಿಖೆ ನಡೆಸಿದರು. ಇದೇ ವೇಳೆ ಆದಿತ್ಯನ್ ಚಿನ್ನದ ಒಡವೆ ಆತನ ಮನೆಯಲ್ಲೇ ಪತ್ತೆಯಾಗಿದೆ. ಮೃತನು ಹೆತ್ತವರ ಹೊರತಾಗಿ ಸಹೋದರಿ ಆದಿರಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.