ನಾಪತ್ತೆಯಾದ ಯುವಕ ತೋಡಿನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಐದು ದಿನಗಳ ಹಿಂದೆ ನಾಪತ್ತೆಯಾದ ಯುವಕ ತೋಡಿನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮೂಲತಃ ಹೊಸದುರ್ಗ ಅಂಬಲತ್ತರ ಚೆಮ್ಮಟಂವಯಲು ನಿವಾಸಿ ಹಾಗೂ ಈಗ ಬದಿಯಡ್ಕ ಸಮೀಪದ ಬಾಂಜತ್ತಡ್ಕ ಇಕ್ಕೇರಿಯಲಿ ರುವ  ಪತ್ನಿ ಊರ್ಮಿಳರ ಮನೆಯಲ್ಲಿ ವಾಸಿಸುತ್ತಿದ್ದ ಪ್ರಕಾಶನ್ ಪಿ ವಿ (41) ಸಾವನ್ನಪ್ಪಿದ ಯುವಕ. ಇವರು ಕಳೆದ ಬುಧವಾರ ತೆಂಗಿನಕಾಯಿ ಕೊಯ್ಯ ಲೆಂದು ಮನೆ ಪಕ್ಕದ ವ್ಯಕ್ತಿಯೋರ್ವ ತೆಂಗಿನ ತೋಟಕ್ಕೆ ಹೋಗಿದ್ದು ಬಳಿಕ ಮನೆಗೆ ಹಿಂತಿರುಗಲಿಲ್ಲವೆಂದು ತಿಳಿಸಿ ಪತ್ನಿ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ  ತನಿಖೆ ಆರಂಭಿಸಿದ್ದರು. ಈ ಮಧ್ಯೆ ಬಾಂಜತ್ತಡ್ಕದ ತೋಡಿನಲ್ಲಿ ಪ್ರಕಾಶನ್‌ರ  ಮೃತದೇಹ ನಿನ್ನೆ ಊರವರು ಪತ್ತೆಹಚ್ಚಿದ್ದಾರೆ. ಅವರು ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಆಗಮಿಸಿ ತನಿಖೆ ನಡೆಸಿದರು. ಬಳಿಕ ನೀಡಲಾದ ಮಾಹಿತಿಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎನ್. ವೇಣುಗೋಪಾ ಲನ್ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ಆಗಮಿಸಿ ಮೊಗ್ರಾಲ್ ನಿವಾಸಿ ಫಾರೂಕ್‌ರ ಸಹಾಯದಿಂದ ಮೃತದೇಹವನ್ನು ತೋಡಿನಿಂದ ಮೇಲೆತ್ತಿದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ಮರ ಣೋತ್ತರ ಪರೀಕ್ಷೆಗೊಳಪಡಿ ಸಲಾಯಿತು.

ನಾಪತ್ತೆಯಾದ ದಿನದಂದು ಪ್ರಕಾಶನ್ ಇಕ್ಕೇರಿ ಸೇತುವೆ  ಮೂಲಕ ನಡೆದು ಹೋಗುತ್ತಿರುವು ದನ್ನು ಕೆಲವರು ಕಂಡಿದ್ದರೆನ್ನಲಾಗಿದೆ. ಆಯತಪ್ಪಿ ತೋಡಿನ ನೀರಿಗೆ ಬಿದ್ದು ಸೆಳತಕ್ಕೊಳಗಾಗಿರಬಹುದೆಂದು ಶಂಕಿಸಲಾಗುತ್ತಿದೆ.

ಮೃತದೇಹವನ್ನು ತೋಡಿನಿಂದ ಮೇಲಕ್ಕೆತ್ತಲು ಅಗ್ನಿಶಾಮಕದಳದ ಇತರ ಸಿಬ್ಬಂದಿಗಳಾದ ಪ್ರಸೀದ್, ಎ.ಕೆ. ಅಭಯ್‌ಸೇನ ಮತ್ತು ಎ. ಪ್ರವೀಣ್ ಎಂಬವರು ಸಹಕರಿಸಿದರು.

ಮೃತರು ಮಕ್ಕಳಾದ ವಂಶಿಕ, ವೈಶಾಖ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page